ವಿ.ಶ್ರೀನಿವಾಸ್ ಪ್ರಸಾದರ ಸಂಪೂರ್ಣ ಮಾಹಿತಿ ಇಲ್ಲಿದೆ!

ಕರ್ನಾಟಕ ದಲಿತ ರಾಜಕೀಯ ದೊಡ್ಡ ನಾಯಕ ತಮ್ಮ 50 ವಷ೯ಗಳ ಸುದೀಘ೯ ರಾಜಕೀಯ ಜೀವನದಲ್ಲಿ ಯಾರಿಗೂ ಸಲಾಂ ಹೊಡೆಯದ ವಿ. ಶ್ರೀನಿವಾಸ್ ಪ್ರಸಾದ್ ರವರು ಆಗಸ್ಟ್ 6 1947 ರಂದು ಮೈಸೂರಿನ ಅಶೋಕಪುರಂ ನಲ್ಲಿ ಜನಿಸಿದರು. ವಿದ್ಯಾಭ್ಯಾಸ ಶಾರದ ವಿಲಾಸ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮುಗಿಸಿದ್ದರು. ಇವರ ರಾಜಕೀಯ ಹಿನ್ನೆಲೆ ಬೂಸಾ ಚಳುವಳಿಯ ಬಿ.ಬಸವಲಿಂಗಪ್ಪ ನವರ ಅಪ್ಪಟ ಅನುಯಾಯಿ ಆಗಿದ್ದ ಇವರು ಬೂಸಾ ಚಳುವಳಿ ಹಿನ್ನೆಲೆಯಲ್ಲಿ ಬಿ.ಬಸವಲಿಂಗಪ್ಪರವರಿಗೆ ಸರ್ಕಾರ ರಾಜೀನಾಮೆ ಪಡೆದಿದ್ದಕ್ಕಾಗಿ ರೋಷಗೊಂಡು ಸ್ವತಃ ತಾವೇ ದಿನಾಂಕ 17-3-1974ನೇ (ಇಂದಿಗೆ 50 ವಷ೯ಗಳ ಹಿಂದೆ) ಮೈಸೂರಿನ ಕೃಷ್ಣರಾಜ ಸಾಮಾನ್ಯ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ವಿದ್ಯಾಥಿ೯ನಾಯಕ, ಉತ್ಸಾಹಿ ತರುಣ ವಿ.ಶ್ರೀನಿವಾಸ ಪ್ರಸಾದ್ ಅವರು ಪ್ರಪ್ರಥಮ ಬಾರಿಗೆ ಪಕ್ಷೇತರ ಅಭ್ಯಥಿ೯ಯಾಗಿ ‘ಒಂಟೆ’ ಗುರುತಿನಿಂದ ಸ್ಪಧಿ೯ಸಿ ಮತವನ್ನು ವಿಭಜಿಸಿ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದರು ಈಗೆ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶ ಮಾಡಿದರು ಹೀಗೆ ಮೈಸೂರು ಭಾಗದಾದ್ಯಂತ ರಾಜಕೀಯವಾಗಿ ಹೆಸರುವಾಸಿಯಾದರು.

ತಮ್ಮ 33ನೇ ವಯಸ್ಸಿನಲ್ಲಿ ಮೊದಲ ಬಾರಿಗೆ 1980ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಸಂಸತ್ ಭವನ ಪ್ರವೇಶಿಸಿದರು. ಹೀಗೆ 9 ಬಾರಿ ಸ್ಪರ್ಧೆ ಮಾಡಿ 7 ಬಾರಿ ಗೆದ್ದು ಜೊತೆಗೆ ಸಚಿವರು ಆಗಿ ಆಯ್ಕೆಯಾಗಿದ್ದರು.
1993ರಲ್ಲಿ ಬದನವಾಳು ಗ್ರಾಮದಲ್ಲಿ ನಡೆದ ಜಾತಿ ಸಂಘರ್ಷದ ಸಂದರ್ಭದಲ್ಲಿ ದಲಿತರ ಸಾಮೂಹಿಕ ಹತ್ಯೆಯನ್ನು ಸಿಬಿಐಗೆ ವಹಿಸಿ ಅಪರಾಧಿಗಳನ್ನು ಜೈಲಿಗೆ ಹಾಕಿಸುವ ಮೂಲಕ ಯಶಸ್ವಿಯಾಗಿದ್ದರು.

ವಿ. ಶ್ರೀನಿವಾಸ್ ಪ್ರಸಾದ್ ರವರು ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಪಕ್ಷಾoತರಗಳನ್ನು ಮಾಡಿದ್ದರು ಆದರೆ ಅವರೇ ಹೇಳುವಂತೆ “ನನಗೆ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನ ಮುಖ್ಯವೇ ಹೊರತು ಯಾವುದೇ ರಾಜಕೀಯ ಪಕ್ಷ ಮುಖ್ಯವಲ್ಲ. ನನ್ನ 50 ವಷ೯ದ ರಾಜಕೀಯ ಜೀವನದಲ್ಲಿ ಅದನ್ನ ಸಾಧಿಸಿ ತೋರಿಸಿದ್ದೇನೆ. ಎಳ್ಳಷ್ಟು ರಾಜಿ ಆಗಲ್ಲ ಅಂಬೇಡ್ಕರ್ ವಿಚಾರದಲ್ಲಿ, ಸಂವಿಧಾನದ ವಿಚಾರದಲ್ಲಿ ಸಾಧ್ಯನೇ ಇಲ್ಲ ಬೇರೆಯವರು ಏನಾದರೂ ಹೇಳಲಿ, ಅದು ನಮ್ಮೆಲ್ಲರ ಮನಸ್ಸಿನಲ್ಲೂ ಬರಬೇಕು” ಎಂದು ಯಾವಾಗಲೂ ಹೇಳುತ್ತಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರದಲ್ಲಿ ಮತ್ತು ಸಂವಿಧಾನ ವಿಚಾರದಲ್ಲಿ ಯಾರೊಂದಿಗೂ ರಾಜಿಯಾಗದೆ ಸ್ವಾಭಿಮಾನ ರಾಜಕಾರಣ ಮಾಡಿದ್ದ ರಾಜಕಾರಣಿ ಇವರು ತಮ್ಮ ಸುಧೀರ್ಘ 50 ವರ್ಷಗಳ ರಾಜಕರಣಕ್ಕೆ ಇತ್ತೀಚಿಗಷ್ಟೇ ನಿವೃತ್ತಿ ಘೋಷಣೆ ಮಾಡಿದ್ದರು.

ಇತ್ತೀಚಿಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಭಯ ಕುಶಲೋಪರಿಗಾಗಿ ಶ್ರೀನಿವಾಸ್ ಪ್ರಸಾದರ ಮನೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ “ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಪರಸ್ಪರ ಎದುರಾಳಿಗಳಾಗಿದ್ದ ಸಂಸದ ವಿ ಶ್ರೀನಿವಾಸ ಪ್ರಸಾದ್ ಮತ್ತು ನಾನು ಇಂದು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದೆವು. ಶ್ರೀನಿವಾಸ ಪ್ರಸಾದ್ ಅವರ ಹೋರಾಟದ ಬದುಕು ಮತ್ತು ಜನಪರ ಕಾಳಜಿಯ ಬಗ್ಗೆ ನಾನು ಸದಾ ಗೌರವ ಇಟ್ಟುಕೊಂಡವನು.
“ಸ್ನೇಹ ಶಾಶ್ವತ, ಮುನಿಸು ಕ್ಷಣಿಕ’’ ಎಂದು ನಂಬಿರುವ ನನಗೆ ಇಂದು ಅದರ ಪ್ರತ್ಯಕ್ಷ ಅನುಭವವಾಯಿತು. ರಾಜಕೀಯದಿಂದ ನಿವೃತ್ತರಾದರೂ ಶ್ರೀನಿವಾಸ ಪ್ರಸಾದ್ ಅವರು ಹೊಸ ತಲೆಮಾರಿಗೆ ಮಾರ್ಗದರ್ಶಕರಾಗಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿರಬೇಕು. ಇದಕ್ಕೆ ಬೇಕಾದ ಆರೋಗ್ಯ ಮತ್ತು ಆಯುಷ್ಯ ಅವರಿಗೆ ಒದಗಿ ಬರಲಿ ಎಂದು ಹಾರೈಸುತ್ತೇನೆ” ಎಂದು ಸಿದ್ದರಾಮಯ್ಯನವರು ಹೇಳಿದ್ದರು.

ಕರ್ನಾಟಕದ ದಲಿತ ರಾಜಕೀಯದ ಅತಿದೊಡ್ಡ ಶಕ್ತಿಯಾಗಿದ್ದ ದಲಿತ ರಾಜಕಾರಣದ ಹೆಗ್ಗುರುತು ವಿ ಶ್ರೀನಿವಾಸ್ ಪ್ರಸಾದ್ ರವರು ಇಂದು 29/4/24ರ 1:20 AM ನಲ್ಲಿ ಕೊನೆ ಉಸಿರೆಳೆದಿದ್ದಾರೆ.

ಹಂಚಿಕೊಳ್ಳಿ / Share

Leave a Reply

Your email address will not be published. Required fields are marked *

ಮೇಲಕ್ಕೆ