ಬಾಬಾಸಾಹೇಬರನ್ನು ಅರಿತುಕೊಳ್ಳಲು ವಿಫಲವಾದ ಶೋಷಿತ ಸಮುದಾಯಗಳು!!

ಶೋಷಿತರ ಧ್ವನಿ ನಮ್ಮ ಬಾಬಾ ಸಾಹೇಬರು…

ಅಂದಿನ ಕಾಲದಲ್ಲಿ ಮನುಸ್ಸೃತಿ ಚಾಲ್ತಿಯಲ್ಲಿ ಇದ್ದ ಸಮಯ ಮನಸ್ಪೃತಿಯನ್ನು ಸುಟ್ಟು ಹಾಕಿದ ಬಾಬಾ ಸಾಹೇಬರು ಅವರ ಕನಸಿನ ನವ ಭಾರತಕ್ಕೆ ಭಾರತೀಯ ಸಂವಿಧಾನವನ್ನು ಬರೆದು ಕೊಟ್ಟರು ಅದರ ಫಲವಾಗಿ ಇಂದು ರೈಲ್ವೆ ಸ್ಟೇಷನ್ ನಲ್ಲಿ ಟೀ ಮಾರುವ ಒಬ್ಬ ಸಾಮಾನ್ಯ ಹುಡುಗ ದೇಶದ ಪ್ರಧಾನ ಮಂತ್ರಿ ಆಗಬಹುದು.
ಆದಿವಾಸಿ ಬುಡಕಟ್ಟು ಜನಾಂಗದ ಮಹಿಳೆ ರಾಷ್ಟ್ರಪತಿಯು ಆಗಬಹುದು. ಸಾಮಾನ್ಯ ಹಳ್ಳಿ ಹುಡುಗ ರಾಜ್ಯದ ಮುಖ್ಯಮಂತ್ರಿ ಆಗಬಹುದು
ಸಾಮಾನ್ಯ ಪ್ರಜೆ ಎಂಪಿ ಎಂ ಎಲ್ ಎ ಆಗಬಹುದು ಎಂದರೆ ಅದಕ್ಕೆಲ್ಲ ಮೂಲ ಕಾರಣ ಬಾಬಾ ಸಾಹೇಬ್ರು ನೀಡಿದ ಸಂವಿಧಾನವೇ ಕಾರಣ .
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರೇ ಯಾರು ನೀನು ಕೇಳು ಜಾತಿ ಭೇದ ತಾರತಮ್ಯ ಭಾವನೆ ಇಲ್ಲ . ಆದರೆ ಇಂದಿಗೂ ಬಾಬಾಸಾಹೇಬರನ್ನು ಒಂದು ವರ್ಗದ ನಾಯಕರಾಗಿ ಗುರುತಿಸಿಬಿಟ್ಟಿದ್ದಾರೆ ಇದು ನಿಜವಾದ ದುರಂತ. ಬಾಬಾ ಸಾಹೇಬರು ಭಾರತದ ಪ್ರತಿಯೊಬ್ಬ ಪ್ರಜೆಗಳಿಗೂ ಗೌರವ ತಂದುಕೊಟ್ಟ ಒಂದು ಘನತೆಯ ಆಸ್ತಿ.
“One MAN One Vote One VALUE ” ಎಂದು ಬಾಬಾ ಸಾಹೇಬರು ನೀಡಿದ ಈ ಒಂದು ನುಡಿಯೇ ಹೇಳುತ್ತದೆ ನಾವೆಲ್ಲರೂ ರಾಜಕೀಯವಾಗಿ ಸಮಾನರು ಎಂದು ತೋರಿಸುತ್ತದೆ ಆದರೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ಅಧಿಕಾರದ ಪರಿಜ್ಞಾನವನ್ನು ಶೋಷಿತ ಸಮುದಾಯಗಳು ಅರಿತುಕೊಳ್ಳಬೇಕು.
ಇನ್ನಾದರೂ ಎಚ್ಚೆತ್ತುಕೊಂಡು ಬಾಬಾಸಾಹೇಬರ ಕನಸಾಗಿದ್ದ “ನನ್ನ ಜನಗಳು ಈ ದೇಶವನ್ನು ಆಳುವ ದೊರೆಗಳಗಬೇಕು” ಎಂಬ ಧ್ಯೇಯ ವಾಕ್ಯವನ್ನು ಈಡೇರಿಸುವ ನಿಟ್ಟಿನಲ್ಲಿ ಶೋಷಿತ ಸಮುದಾಯಗಳು ಎಚ್ಚೆತ್ತುಕೊಂಡು ಮುನ್ನಡೆಯಬೇಕಿದೆ.

“ಸರ್ವರಿಗೂ ವಿಶ್ವಜ್ಞಾನಿ ಬೋಧಿಸತ್ವ ತಂದೆ ಬಾಬಾ ಸಾಹೇಬರ 133 ನೇ ಜನ್ಮ ದಿನಾಚರಣೆ ಶುಭಾಷಯಗಳು..❤💙✊✊

ಇಂದಿನ ಬಾಬಾ ಸಾಹೇಬರ ಜನ್ಮದಿನವನ್ನು ಒಂದು ದಿನಕ್ಕೆ ಸೀಮಿತಮಾಡಬಾರದು ವರ್ಷದ 364 ದಿನಗಳು ಕೂಡ ಬಾಬಾ ಸಾಹೇಬರ ಜನ್ಮದಿನವೇ ಎಂದು ಭಾವಿಸಬೇಕು .
ಬಾಬಾ ಸಾಹೇಬರ ಜನ್ಮದಿನವನ್ನು ಆಚರಿಸಿಕ್ಕಿಂತಲೂ ಹೆಚ್ಚಾಗಿ ಅವರನ್ನು ಅನುಸರಿಸಬೇಕು..✊😊
ಮತ್ತೊಮ್ಮೆ ಸಮಾನತವಾದಿ ಶೋಷಿತರ ಧ್ವನಿ ನೊಂದವರ ಆಶಾಕಿರಣ ಸಂವಿಧಾನದ ಜನಕ ಬೋಧಿಸತ್ವ ಪರಮಪೂಜ್ಯ ತಂದೆ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ 133 ನೇ ಜಯಂತಿಯ ಶುಭಾಶಯಗಳು..💐💐💐

“ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕಿಲ್ಲ. ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕು.”

ಡಾ . ಬಿ ಆರ್ ಅಂಬೇಡ್ಕರ್
ಜೈ ಭೀಮ್✊ಜೈ ಭಾರತ್💙

ಹಂಚಿಕೊಳ್ಳಿ / Share

Leave a Reply

Your email address will not be published. Required fields are marked *

ಮೇಲಕ್ಕೆ