ಬಿಕ್ಕಟ್ಟಿಗೆ ದೂಡದಿರಲಿ ಭೂತಾಪಮಾನ!

ಜಾಗತಿಕ ತಾಪಮಾನ ಏರಿಕೆ ಮನುಕುಲ ಎದುರಿಸುತ್ತಿರುವ ಈ ಶತಮಾನದ ಜ್ವಲಂತ ಸಮಸ್ಯೆಯಾಗಿದೆ. ಈ ಜಾಗತಿಕ ತಾಪಮಾನ ಏರಿಕೆಗೆ ಹಸಿರು ಮನೆ ಅನಿಲಗಳು ಕಾರಣವಾಗಿದೆ. ಕಾರ್ಬನ್ ಡೈ ಆಕ್ಸೈಡ್, ಮಿಥೇನ್, ನೈಟ್ರಸ್ ಆಕ್ಸೈಡ್, CFC ಮತ್ತು ನೀರಾವಿ ಇತ್ಯಾದಿ ಇದರಲ್ಲಿ ಜಾಗತಿಕ ತಾಪಮಾನ ಏರಿಕೆಗೆ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿದೆ.
2023ನೇ ವರ್ಷವೂ ಅತಿ ಹೆಚ್ಚು ತಾಪಮಾನ ದಾಖಲಾದ ವರ್ಷವಾಗಿತ್ತು 2024ನೇ ವರ್ಷವೂ ಅದರ ದಾಖಲೆ ಮೀರುವ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ. ದಿನದಿಂದ ದಿನಕ್ಕೆ ಒಂದಲ್ಲ ಒಂದು ಕಡೆ ಜಾಗತಿಕ ತಾಪಮಾನದಿಂದ ಸಮಸ್ಯೆಗಳು ಸಂಭವಿಸುತ್ತಿವೆ. ಹಿಮಗಡ್ಡೆ ಕರಗುವಿಕೆ, ದ್ವೀಪಗಳು ಮುಳುಗುವಿಕೆ, ಅತಿವೃಷ್ಟಿ ಅನಾವೃಷ್ಟಿ, ಸಮುದ್ರಮಟ್ಟದ ಏರಿಕೆ, ಬಿಸಿ ಗಾಳಿ ಇದೇ ತರ ಅನೇಕ ಸಮಸ್ಯೆಗಳನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ.

2015 ರ ಪ್ಯಾರಿಸ್ ಒಪ್ಪಂದವು ಜಾಗತಿಕ ತಾಪಮಾನ 2°C ಮೀರಬಾರದೆಂದು ನಿರ್ಧರಿಸಲಾಯಿತು ಇದು ಸಾಧ್ಯವಾಗಬೇಕಾದರೆ ಇದನ್ನು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಬೇಕು ಸರ್ಕಾರಗಳು ಸೂಕ್ತ ಕಾನೂನುಗಳನ್ನು ತರಬೇಕು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ಬೆಳವಣಿಗೆ ಪ್ರೋತ್ಸಾಹಿಸುವುದು. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಭೂಮಿಯಲ್ಲಿ ಬದುಕಲು ಕಷ್ಟಕರವಾಗಲಿದೆ ನಮ್ಮ ಭವಿಷ್ಯ.

ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಹೇಳುವಂತೆ “ಹವಾಮಾನ ಬದಲಾವಣೆಯು ಗಡಿಯನ್ನು ಗೌರವಿಸುವುದಿಲ್ಲ ನೀವು ಶ್ರೀಮಂತ ಮತ್ತು ಬಡವ ಅಥವ ಸಣ್ಣ ಮತ್ತು ದೊಡ್ಡ ಯಾರೆಂದು ಅದು ಗೌರವಿಸುವುದಿಲ್ಲ ಆದ್ದರಿಂದ ಇದನ್ನು ನಾವು ಜಾಗತಿಕ ಸವಾಲುಗಳು ಎಂದು ಕರೆಯುತ್ತೇವೆ ಇದಕ್ಕೆ ಜಾಗತಿಕ ಒಗ್ಗಟ್ಟಿನ ಅಗತ್ಯವಿರುತ್ತದೆ” ಆದ್ದರಿಂದ ಮನುಕುಲದ ಭವಿಷ್ಯವನ್ನು ಭದ್ರವಾಗಿಸುವ ಮೂಲಕ ಇಡೀ ಜೀವಸಂಕುಲವನ್ನು ಸಂರಕ್ಷಿಸುವ ಸಂಕಲ್ಪವನ್ನು ಕೈಗೊಂಡು ಭೂತಾಪಮಾನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

– ಮಹದೇವಪ್ರಸಾದ್

( ನಿಮ್ಮಲ್ಲಿ ಪರಿಸರ, ಶಿಕ್ಷಣ, ಪ್ರಜಾಪ್ರಭುತ್ವ, ಸಾಮಾಜಿಕ, ಆರ್ಥಿಕ ವಿಷಯಗಳ ಬಗ್ಗೆ ಮತ್ತು ಪ್ರಚಲಿತ ವಿದ್ಯಮಾನಗಳ ಹಾಗೆಯೇ ಮತ್ಯಾವುದೇ ವಿಷಯಗಳ ಬಗ್ಗೆ ಲೇಖನಗಳು ಇದ್ದಾರೆ ನಮಗೆ Email ಮೂಲಕ ತಲುಪಿಸಿದರೆ ಅದನ್ನು ನಮ್ಮ ತಂಡ ಪರೀಕ್ಷಿಸಿ ನಮ್ಮ ಮಾಧ್ಯಮದಲ್ಲಿ ಪ್ರಕಟಿಸಲಾಗುವುದು. Email: digital.fastkannada@gmail.com)

ಹಂಚಿಕೊಳ್ಳಿ / Share

Leave a Reply

Your email address will not be published. Required fields are marked *

ಮೇಲಕ್ಕೆ