ಮುಖ್ಯಾಂಶಗಳು

Deekshabhoomi Yathra 2026: ದೀಕ್ಷಾ ಭೂಮಿ ಯಾತ್ರಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ

deeksha bhoomi yatra application deeksha bhoomi yatra application Karnataka

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು 2026-27ನೇ ಸಾಲಿನ ಮಹಾರಾಷ್ಟ್ರದ ನಾಗಪುರದಲ್ಲಿರುವ ಪವಿತ್ರ ದೀಕ್ಷಾ ಭೂಮಿ ಯಾತ್ರೆಗೆ ಅರ್ಹ ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ ಪವಿತ್ರ ದಿನವಾದ ದಮ್ಮ ಚಕ್ರ ಪ್ರವರ್ತನಾ ದಿನದ (ವಿಜಯದಶಮಿ) ವಾರ್ಷಿಕ ಮಹೋತ್ಸವವು ನಾಗಪುರದಲ್ಲಿ ಅದ್ಧೂರಿಯಾಗಿ ಜರುಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಬಯಸುವ ಕರ್ನಾಟಕದ ಯಾತ್ರಿಕರಿಗೆ ಸರ್ಕಾರವು ಸುಗಮ ಪ್ರಯಾಣದ ವ್ಯವಸ್ಥೆ ಕಲ್ಪಿಸುತ್ತಿದೆ.

ದೀಕ್ಷಾಭೂಮಿ ಯಾತ್ರೆ 2026 ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು 

🗓️ ಅರ್ಜಿ ಪ್ರಾರಂಭ: 19 ಸೆಪ್ಟೆಂಬರ್ 2026

⏳ ಕೊನೆಯ ದಿನಾಂಕ: 09 ಅಕ್ಟೋಬರ್ 2026

ದೀಕ್ಷಾಭೂಮಿ ಯಾತ್ರೆಯ ಮಹತ್ವ

1956ರಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಲಕ್ಷಾಂತರ ಜನರೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿ, ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯ ಮೌಲ್ಯಗಳ ಕ್ರಾಂತಿಯನ್ನು ಪ್ರಾರಂಭಿಸಿದರು.

ಈ ದಿನವನ್ನು ಧಮ್ಮ ಪ್ರವರ್ತನ ದಿನಾಚರಣೆ ಎಂದು ಆಚರಿಸಲಾಗುತ್ತದೆ.

ಯಾತ್ರೆಯು ಅಂಬೇಡ್ಕರರ ಚಿಂತನೆ ಮತ್ತು ಬೌದ್ಧ ತತ್ತ್ವಗಳನ್ನು ಅರಿಯಲು ಅಪೂರ್ವ ಅವಕಾಶ.

ಸಾವಿರಾರು ಜನರು ದೀಕ್ಷಾಭೂಮಿಯಲ್ಲಿ ಸೇರಿ ಧಮ್ಮದ ದೀಪ ಬೆಳಗಿಸುವುದು ವಿಶೇಷತೆ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

  • ಆಧಾರ್ ಕಾರ್ಡ್ ಪ್ರತಿ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅನ್ವಯವಾಗುವಂತೆ)
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ (SMS ಅಧಿಸೂಚನೆಗಳಿಗಾಗಿ)

ಯಾರು ಅರ್ಜಿ ಸಲ್ಲಿಸಬಹುದು?

1) ಈ ಯೋಜನೆಯಡಿಯಲ್ಲಿ ಪ್ರಯಾಣಿಕರು ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸೌಲಭ್ಯವನ್ನು ಪಡೆದಿದ್ದರೆ ಅವರು ಎರಡನೇ ಬಾರಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಮತ್ತು ಆಯ್ಕೆಯ ಮೊದಲು ಅದನ್ನು ಪರಿಶೀಲಿಸಲಾಗುತ್ತದೆ.

2) ಸರ್ಕಾರಿ ನೌಕರರಿಗೆ ಅವಕಾಶ ಇರುಹುದಿಲ್ಲ.

4) ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಅರ್ಹತಾ ನಿಯಮಾವಳಿಯ ಪ್ರಕಾರ ಅರ್ಜಿ ಸಲ್ಲಿಸಬಹುದು.

5)  ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ.

🌐 ಅಧಿಕೃತ ವೆಬ್‌ಸೈಟ್ ಲಿಂಕ್: https://swdservices.karnataka.gov.in/dkby/deekshabhoomiyathra/yathra/yathramainhome.aspx

ದೀಕ್ಷಾಭೂಮಿ ಯಾತ್ರೆ ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ, ಅದು ಮಾನವೀಯತೆ ಮತ್ತು ಸಮಾನತೆಗಾಗಿ ಹೋರಾಟದ ಚಿಹ್ನೆ. 2026ರ ಧಮ್ಮ ಪ್ರವರ್ತನ ದಿನಾಚರಣೆಯಲ್ಲಿ ಪಾಲ್ಗೊಳ್ಳಿ ಮತ್ತು ಇತಿಹಾಸದ ಸಾಕ್ಷಿಯಾಗಿರಿ.


ಹಂಚಿಕೊಳ್ಳಿ / Share
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.