ಮುಖ್ಯಾಂಶಗಳು

ಬಾಬಾಸಾಹೇಬರು ಬೌದ್ಧ ಧರ್ಮ ಸೇರಲು ಕಾರಣ ಮತ್ತು ನವಯಾನ!

ತನ್ನ ಹುಟ್ಟಿನಿಂದಲೂ ಜಾತಿಯ ಕಾರಣದಿಂದ ಆಸ್ಪೃಶ್ಯತೆ ಅನುಭವಿಸಿ ಬೆಳೆದ ಬಾಬಾಸಾಹೇಬರು ಜಾತಿಯಿಂದ ಹೊರಬರಬೇಕಾದರೆ ಶಿಕ್ಷಣ ಅಗತ್ಯ ಎಂದು ತಿಳಿದು ಸಾಕಷ್ಟು ಕಷ್ಟ ಕಾರ್ಪಣ್ಯ ಅನುಭವಿಸಿ ಓದಿದರು ಇವರಿಗೆ ಕೊಲ್ಲಾಪುರದ ರಾಜ ಶಾಹು ಮಹಾರಾಜ್ ಅವರು ಅಂಬೇಡ್ಕರ್ ಅವರ ಆರಂಭಿಕ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರು ಮತ್ತು ಬರೋಡಾದ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ III ರವರು USAನಲ್ಲಿ ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿವೇತನವನ್ನು ನೀಡಿದರು ಇವರುಗಳ ಸಹಾಯದಿಂದ ಸಾಕಷ್ಟು ದೇಶಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಮರಳಿದಾಗ ಜಾತಿ ಅನ್ನುವ ರೋಗ ಜನರ ತಲೆಯಿಂದ ದೂರವಾಗಿರಲಿಲ್ಲ ಅಲ್ಲಿಯೂ ಅವರಿಗೆ ಜಾತಿ ವ್ಯವಸ್ಥೆ ನೋವನ್ನುಂಟು ಮಾಡಿತ್ತು.

ಬರೋಡದಲ್ಲಿ ನಡೆದ ಘಟನೆ!

ಒಮ್ಮೆ ವಿದೇಶದಿಂದ ಅಂಬೇಡ್ಕರ್ ಬರೋಡಾಗೆ ಬಂದರು ಅವರು ಬರೋಡದ ಮಹಾರಾಜರ ವಿಧ್ಯಾರ್ಥಿ ವೇತನದಿಂದ ವಿದ್ಯಾಭ್ಯಾಸ ಮಾಡಿದ್ದರು ಆ ವಿದ್ಯಾರ್ಥಿವೇತನ ಒಪ್ಪಂದವನ್ನು ಪೂರೈಸಲು ಕೆಲಸ ಮಾಡಬೇಕಾಗಿತ್ತು. ಆ ಸಂಧರ್ಭದಲ್ಲಿ ಅಲ್ಲಿ ತಾವು ಉಳಿಯಲು ಜಾಗ ಕಂಡುಕೊಂಡಿರಲಿಲ್ಲ, ಅಲ್ಲಿಯೇ ಸ್ವಲ್ಪ ದಿನಗಳ ಮಟ್ಟಿಗೆ ಒಂದು ಪಾರ್ಸಿ ಜನಾಂಗದ ಹೋಟೆಲ್ನಲ್ಲಿ ಉಳಿದಿದ್ದರು. ತಾವು ಹಿಂದೂ ಎಂದು ಹೇಳಿಕೊಂಡಿದ್ದ ಬಾಬಾಸಾಹೇಬರು ಅಲ್ಲಿನ ಸಿಬ್ಬಂದಿಯು ಪಾರ್ಸಿ ಹೆಸರನ್ನು ನಮೂದಿಸಲು ಸೂಚಿಸಿದ್ದ. ನಂತರ ಅಲ್ಲಿನ ಜನರು ಆದಾಗ್ಯೂ, ಬಾಬಾಸಾಹೇಬರು ಜಾತಿಯನ್ನು ತಿಳಿದು ಉದ್ರೇಕಗೊಂಡು ಪಾರ್ಸಿಗಳ ಗುಂಪೊಂದು ಹೋಟೆಲ್‌ಗೆ ನುಗ್ಗಿತು ಅವರೆಲ್ಲರೂ ಬಾಬಾಸಾಹೇಬರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು “ನೀನು ಯಾರು? ನೀನು ಯಾಕೆ ಇಲ್ಲಿಗೆ ಬಂದೆ? ಪಾರ್ಸಿ ಹೆಸರನ್ನು ತೆಗೆದುಕೊಳ್ಳಲು ನಿಮಗೆ ಎಷ್ಟು ಧೈರ್ಯ? ನೀನು ದುಷ್ಟ! ನೀವು ಪಾರ್ಸಿ ಹೋಟೆಲ್ ಅನ್ನು ಕಲುಷಿತಗೊಳಿಸಿದ್ದೀಯ! ಸಂಜೆಯ ಹೊತ್ತಿಗೆ ನನ್ನನ್ನು ಹೋಟೆಲಿನಲ್ಲಿ ಕಾಣಬಾರದು ಎಂದು ಬೆದರಿಕೆ ಆಕಿದ್ದರ! ಆಮೇಲೆ ಬಾಬಾಸಾಹೇಬರು ಆ ಜಾಗ ತೊರೆದರು. ನಿರಾಶೆಗೊಂಡ ಬಾಬಾಸಾಹೇಬರು ಬೇರೆಡೆ ತಾತ್ಕಾಲಿಕ ಆಶ್ರಯವನ್ನು ಹುಡುಕಲು ಪ್ರಯತ್ನಿಸಿದರು ಆದರೆ ಅದು ಸಾಧ್ಯವಾಗಲಿಲ್ಲ ನಂತರ ಬಾಂಬೆಗೆ ಹೊರಟರು.

ಹೀಗೆ ಜೀವನದುದ್ದಕ್ಕೂ ಜಾತಿಯ ಸಂಕೋಲೆಗಳಿಂದ ಹೊರಬರಲು ಅಧ್ಯಯನ ಮಾಡುವ ಸಂದರ್ಭದಲ್ಲಿ ಮತ್ತು ತನ್ನ ಜನರಿಗೆ ಜಾತಿ ಸಂಕೋಲೆಗಳಿಂದ ಹೊರ ತರುವ ಉದ್ದೇಶದಿಂದ ಸಂವಿಧಾನದ ಮೂಲಕ ಹಕ್ಕುಗಳಿಗೆ ಹೋರಾಟಮಾಡಿ ಜಾರಿಗೆ ತಂದು ಮತ್ತು ತಮ್ಮ ಪತ್ರಿಕೆಗಳ ಮೂಲಕ ಜಾಗೃತಿಗೊಳಿಸುತ್ತ ಹಾಗೆಯೇ ತಮ್ಮ 20000 ಸಾವಿರಕ್ಕೂ ಅಧಿಕ ಪುಟಗಳ ಮೂಲಕ ದಾಖಲಿಸಿ ಜಾತಿರಹಿತ, ವರ್ಗರಹಿತ, ಸಮಸಮಾಜ ಸಿರ್ಮಿಸುವ ಸಲುವಾಗಿ ಜೀವನದ ಕೊನೆಯ ದಿನಗಳಲ್ಲಿ ಬುದ್ಧನನ್ನು ಅರಿತು ಅವನ ಆದರ್ಶಗಳನ್ನೂ ತಿಳಿದು, ಇದೆ ಧಮ್ಮಮಾರ್ಗ ಅಗತ್ಯ ಎಂದು ಬುದ್ಧನ ವೈಜ್ಞಾನಿಕ ವಿಚಾರ ಮತ್ತು ಆದರ್ಶಗಳ ಜೊತೆ ತಮ್ಮದೇ ಆದ ಒಂದು ನವಯಾನ ಬೌದ್ಧ ಧರ್ಮವನ್ನು ಸ್ಥಾಪಿಸಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಸೇರಿದರು.

ಬುದ್ಧನನ್ನು ಆಯ್ಕೆ ಮಾಡಿಕೊಳ್ಳಲು ಕಾರಣ?

ಅಂಬೇಡ್ಕರ್ ಅವರು ಬೇರೆ ಧರ್ಮ ಸೇರಲು ಮುಖ್ಯ ಕಾರಣ ಹಿಂದೂ ಧರ್ಮಲ್ಲಿದ್ದ ಜಾತಿ ವ್ಯವಸ್ಥೆ ಮತ್ತು ಲಿಂಗ ಅಸಮಾನತೆ ಹಾಗೆ ಚಾತುರ್ವರ್ಣ ಪದ್ಧತಿ ಮತ್ತು ಇನ್ನಿತರ ಪದ್ಧತಿಗಳು ಜನರನ್ನು ಗುಲಾಮರಾಗಿ ಮಾಡಿದ್ದ ಕಾರಣ ಅವರು ಮೊದಲೇ ಹಿಂದುವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯಲಾರೆ ಎಂದು 20 ವರ್ಷಗಳ ಮುಂಚೆಯೇ ಹೇಳಿದ್ದರು. ಬುದ್ಧನು ಆತ್ಮ, ಕರ್ಮ ಮತ್ತು ಪುನರ್ಜನ್ಮ ಒಪ್ಪಿರಲಿಲ್ಲ ಈ ವೈಜ್ಞಾನಿಕ ಅಂಶಗಳು ಮತ್ತು ಪಂಚಶೀಲ ತತ್ವಗಳು ಬಾಬಾ ಸಾಹೇಬರನ್ನು ಆಕರ್ಷಿಸಿತು.

ಬುದ್ಧನ ಧರ್ಮದಲ್ಲಿ ವೈಚಾರಿಕತೆ, ನೈತಿಕತೆ ಮತ್ತು ನ್ಯಾಯ ಮತ್ತು ಸಮಾನತೆಯಿಂದ ಕೂಡಿತ್ತು ಜೊತೆಗೆ ಇತಿಹಾಸದಲ್ಲಿ ಸಾಮ್ರಾಟ್ ಅಶೋಕ ಏಷ್ಯಾ ಖಂಡದಲ್ಲಿ ಬಹುಪಾಲು ಆಳ್ವಿಕೆಮಾಡಿ ಬುದ್ಧನ ವೈಚಾರಿಕ ನ್ಯಾಯ ಮತ್ತು ಸಮಾನತೆಯ ರಾಜ್ಯವನ್ನು ಸ್ಥಾಪನೆ ಮಾಡಿ ಆಳಿದ್ದು ಬಾಬಾ ಸಾಹೇಬರನ್ನು ಅತಿ ಹೆಚ್ಚಾಗಿ ಆಕರ್ಷಣೆ ಮಾಡಿತು ಇದು ಒಂದು ಬಹು ಮುಖ್ಯ ವಿಚಾರ.
ಪ್ರತಿಯೊಬ್ಬ ಮಾನವ ಕಲ್ಯಾಣಕ್ಕಾಗಿ ಅವರಿಗಿದ್ದ ಒಲವು ಅವರನ್ನು ಬೌದ್ಧ ಧರ್ಮದ ಕಡೆಗೆ ಕರೆದೊಯಿತು.

ಹಾಗೆಯೇ ಅಂಬೇಡ್ಕರ್ ಅವರು ಬುದ್ಧನೇ ಮೇಲೆ ಬರೆದಿರುವ ಕಥೆಗಳನ್ನು ಒಪ್ಪಲಿಲ್ಲ ಅವುಗಳೆಂದರೆ “ಬುದ್ಧ ತನ್ನ 29ನೇ ವಯಸ್ಸಿಗೆ ಮನೆ ತೊರೆದು ಹೋದ ಕಾರಣ ಅವನು ವಯಸ್ಸಾದವರನ್ನು, ರೋಗಿಯನ್ನು, ಸಾವನ್ನಪ್ಪಿರುವ ವ್ಯಕ್ತಿಯನ್ನು ನೋಡಿದ ಆಮೇಲೆ ಅಲೆಮಾರಿಯಾಗಿ ಪ್ರಪಂಚ ತಿಳಿಯಲು ಹೋದ” ಇವೆಲ್ಲನ್ನು ಒಪ್ಪಲಿಲ್ಲ ಬಾಬಾಸಾಹೇಬರು. ಅವರು ತಮ್ಮದೇ ಬುದ್ಧನ ಚರಿತ್ರೆಯನ್ನು ಅರಿತು ಬರೆದಿದ್ದಾರೆ. ನಂತರ ಈಗೆ ಸಾಕಷ್ಟು ಅಧ್ಯಯನ ಮಾಡಿ ಬೌದ್ಧ ಧರ್ಮ ಆಯ್ಕೆ ಮಾಡಿಕೊಂಡರು.

ನವಯಾನ ಬುದ್ಧಿಸಂ ಎಂದರೇನು?

ನವಯಾನ ಬುದ್ಧಿಸಂ ಇದನ್ನು ಅಂಬೇಡ್ಕರೈಟ್ ಬುದ್ಧಿಸo ಎಂದು ಸಹ ಕರೆಯುತ್ತಾರೆ. ಅಂಬೇಡ್ಕರ್ ಅವರು ಬುದ್ಧ ಧರ್ಮ ಸೇರುವಾಗ ಅಲ್ಲಿ ಮಹಾಯಾನ ಮತ್ತು ಹೀನಯಾನ ಎಂದು ಪ್ರತ್ಯೇಕ ಪಂಗಡಗಳಿದ್ದವು ಆಗ ಅಂಬೇಡ್ಕರ್ ರವರು “ನಾನು ಬುದ್ಧನ ಬೋಧನೆಗಳನ್ನು ಸ್ವೀಕರಿಸುತ್ತೇನೆ ಮತ್ತು ಅನುಸರಿಸುತ್ತೇನೆ. ನಾನು ನನ್ನ ಜನರನ್ನು ಹೀನಯಾನ ಮತ್ತು ಮಹಾಯಾನ ಎಂಬ ಎರಡು ಧಾರ್ಮಿಕ ಪದ್ಧತಿಗಳಿಂದ ದೂರವಿಡುತ್ತೇನೆ. ನಮ್ಮ ಬೌದ್ಧಧರ್ಮವು ನವ-ಬೌದ್ಧ ಧರ್ಮ ನವಯಾನ” ಎಂದು ಹೇಳಿ ಸ್ಥಾಪಿಸಿದರು.

ಅಂಬೇಡ್ಕರ್ ಅವರು ಬುದ್ಧ ಮತ್ತು ಅವರ ಧಮ್ಮ ಎಂದು ಕೃತಿ ಬರೆದಿದ್ದಾರೆ ಅದು ನವಾಯನ ಬೌದ್ಧಧರ್ಮವನ್ನು ಅನುಸರಿಸುವವರಿಗೆ ಗ್ರಂಥವಾಗಿದೆ ಮತ್ತು ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸುವಾಗ ತೆಗೆದುಕೊಂಡ ಪ್ರತಿಜ್ಞೆಗಳು ಮುಖ್ಯವಾದವು. ಅಂಬೇಡ್ಕರ್ ಅವರ ಜಯಂತಿ, ನಮ್ಮ ಚಕ್ರ ಪ್ರವರ್ತನ ದಿನ ಮತ್ತು ಬುದ್ಧ ಪೂರ್ಣಿಮೆ ನವಯಾನ ಬೌದ್ಧರ ಪ್ರಮುಖ ಹಬ್ಬದ ದಿನಗಳು.
ಈ ಧರ್ಮವು ಸಾಮಾಜಿಕ ಸಮಾನತೆ, ಜಾತಿ ತಾರತಮ್ಯವನ್ನು ತಿರಸ್ಕರಿಸುವುದನ್ನು ಒಳಗೊಂಡಿದೆ. ಇಂದಿನ ದಿನಗಳಲ್ಲಿ ನವಯಾನ ಬುದ್ಧಿಸಂ ಅಂಬೇಡ್ಕರ್ ಓದಿದ ಪ್ರತಿಯೊಬ್ಬರಿಗೂ ತಲುಪುತ್ತಿದೆ ಮತ್ತು ದೇಶದಲ್ಲಿ ಕೋಟ್ಯಾಂತರ ಜನರು ನವಯಾನ ಬುದ್ಧಿಸಂ ಅನುಸರಿಸಿಸುವ ಜನರಿದ್ದಾರೆ.

– ಮಹದೇವಪ್ರಸಾದ್

ಇನ್ನೂ ಹೆಚ್ಚಿನ ನವಯಾನ ಧರ್ಮದ ಮಾಹಿತಿಗಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬುದ್ಧ ಮತ್ತು ಆತನ ಧಮ್ಮ ಪುಸ್ತಕ ಓದಿ
(ಪುಸ್ತಕದ ಸಾಫ್ಟ್ ಕಾಪಿ pdf ಬೇಕಾದಲ್ಲಿ insta ನಲ್ಲಿ DM ಮಾಡಿ)

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.