ಗ್ರಾಮೀಣ ಪ್ರದೇಶದ ಸಾರ್ವಜನಿಕರ ಕುಂದು ಕೊರತೆಗಳನ್ನು ದಾಖಲಿಸಲು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಿರುವ ಪಂಚಮಿತ್ರ ಪೋರ್ಟಲ್ ಮತ್ತು ಪಂಚಮಿತ್ರ WhatsApp chat ಗೆ ಮಾನ್ಯ ಇಲಾಖಾ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ರವರು ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಸಚಿವರು, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಮಿತ್ರ WhatsApp chat ಅಭಿವೃದ್ಧಿ ಪಡಿಸಿದೆ.
ಸಾರ್ವಜನಿಕರು ಕುಳಿತಲ್ಲೇ ಗ್ರಾಮ ಪಂಚಾಯತಿ ವಿವರಗಳು ಹಾಗೂ ಸೇವೆಗಳಿಗೆ ಅರ್ಜಿ ಸಲ್ಲಿಸುವುದು ಮತ್ತು ಕುಂದುಕೊರತೆಗಳನ್ನು ಪಂಚಮಿತ್ರ WhatsApp chat ಸಂಖ್ಯೆ 82775 06000 ನಲ್ಲಿ ದಾಖಲಿಸಬಹುದು ಎಂದು ತಿಳಿಸಿದರು. ಅಪರ ಮುಖ್ಯ ಕಾರ್ಯದರ್ಶಿ (ಪಂ.ರಾಜ್.) ಶ್ರೀಮತಿ ಉಮಾ ಮಹಾದೇವನ್ ರವರು ಸಾರ್ವಜನಿಕರ ಅನುಕೂಲಕ್ಕಾಗಿ ಪಂಚಮಿತ್ರ ಪೋರ್ಟಲ್ ಮತ್ತು ಪಂಚಮಿತ್ರ WhatsApp chat ಅಭಿವೃದ್ಧಿ ಪಡಿಸಲಾಗಿದೆ. ರಾಜ್ಯದ 5951 ಗ್ರಾಮ ಪಂಚಾಯತಿಗಳ ದೈನಂದಿನ ಆಡಳಿತ ನಿರ್ವಹಣೆಯಲ್ಲಿ ಪಂಚತಂತ್ರ 2.0 ತಂತ್ರಾಂಶವನ್ನು ಬಳಸಲಾಗುತ್ತಿದೆ.
ಈ WhatsApp chat ನಲ್ಲಿ ಸಿಗುವ ಮಾಹಿತಿಗಳು:
• ಪಂಚಮಿತ್ರ ಪೋರ್ಟಲ್ ನಲ್ಲಿ ಚುನಾಯಿತ ಪ್ರತಿನಿಧಿಗಳ ವಿವರಗಳು.
• ಕುಂದುಕೊರತೆಗಳನ್ನು ದಾಖಲಿಸಬಹುದು.
• ಸಿಬ್ಬಂದಿಗಳ ವಿವರಗಳು.
• ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಸ್ಥಿತಿಗತಿ.
• ಗ್ರಾಮ ಪಂಚಾಯತಿ ಸಭೆಗಳ ನಡವಳಿಗಳು ಹಾಗೂ ಇನ್ನಿತರೆ ಮಾಹಿತಿ ಸಹ ಪರಿಶೀಲಿಸಬಹುದು.
ಈ WhatsApp chat ಬಳಸುವ ವಿಧಾನ:
- ಮೊದಲು ನಿಮ್ಮ ಮೊಬೈಲ್ ನಿಂದ ಈ ನಂಬರ್ 82775 06000 ಸಂದೇಶ (Hi) ಕಳುಹಿಸಬೇಕು.
- ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸುಸ್ವಾಗತ (RDPR)🙏. ಈ ಸಂದೇಶ ಪಡೆಯುವಿರಿ.
- ನಿಮ್ಮ ಭಾಷೆಯನ್ನು ಆಯ್ಕೆ ಮಾಡಲು ಕೇಳುತ್ತದೆ(ಕನ್ನಡ/English).
- ನಂತರ ಎಲ್ಲಾ ಜಿಲ್ಲೆಗಳ ಹೆಸರನ್ನು ನೀಡುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆಯ ಸಂಖ್ಯೆಯನ್ನು ಆಯ್ಕೆ ಮಾಡಿ.
- ನಂತರ ನಿಮ್ಮ ತಾಲೂಕು, ಪಂಚಾಯಿತಿ ಮತ್ತು ಗ್ರಾಮ ಈಗೆ ಒಂದರ ನಂತರ ಒಂದು ಕೇಳುತ್ತದೆ ಅಲ್ಲಿ ನಿಮ್ಮ ಆಯ್ಕೆ ಮಾಡಿ.
- ನಂತರ ನಿಮ್ಮಗೆ ಅಗತ್ಯವಿರುವ ಮಾಹಿತಿ ಆಯ್ಕೆ ಮಾಡಿ ಪಡೆದುಕೊಳ್ಳಿ.
ಇದಿಷ್ಟು ಬಳಸುವ ವಿಧಾನ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಮ್ಮ fastkannada notification on ಮಾಡಿಕೊಳ್ಳಿ(side red button).