ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರವು ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಯುವಕರಿಗೆ ಸ್ವಾವಲಂಬನೆ ಕಲ್ಪಿಸಲು ಬ್ಯಾಂಕ್ಗಳ ಸಹಯೋಗದೊಂದಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಡಿ ವಿವಿಧ ವಲಯಗಳಲ್ಲಿ ಘಟಕ ವೆಚ್ಚದ ನಿಗದಿತ ಪ್ರಮಾಣಕ್ಕೆ ಸಹಾಯಧನ (ಸಬ್ಸಿಡಿ) ದೊರೆಯುತ್ತದೆ. ಹೀಗಾಗಿ, ನಿಮ್ಮ ಸ್ವಂತ ವ್ಯವಹಾರ ಆರಂಭಿಸಲು ಬಯಸುವವರು ಈ ಯೋಜನೆಯಡಿ ನೆರವು ಪಡೆಯಬಹುದು.
- ಸ್ವಾವಲಂಬಿ ಸಾರಥಿ ಯೋಜನೆ
ಉದ್ದೇಶ: ಸರಕು ವಾಹನ ಅಥವಾ ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿ.
ಸಹಾಯಧನ: ಘಟಕ ವೆಚ್ಚದ ಶೇ. 75 ರಷ್ಟು ಅಥವಾ ಗರಿಷ್ಟ ರೂ. 4.00 ಲಕ್ಷ.
ಲಾಭ: ಸ್ವಂತ ವಾಹನ ಹೊಂದಿ ಸಾರಿಗೆ ವ್ಯವಹಾರ ಆರಂಭಿಸಲು ಆಸಕ್ತ ಯುವಕರಿಗೆ ಅತ್ಯುತ್ತಮ ಅವಕಾಶ.
- ಫಾಸ್ಟ್ ಫುಡ್ ಟ್ರಕ್ / ಟ್ರೈಲರ್ / ಮೊಬೈಲ್ ಕಿಚನ್ / ಫುಡ್ ಕಿಯೋಸ್ಕ್
ಉದ್ದೇಶ: ಫುಡ್ ಕಾರ್ಟ್ ವಾಹನ ಅಥವಾ ಮೊಬೈಲ್ ಕಿಚನ್ ಮೂಲಕ ಆಹಾರ ಮಾರಾಟ.
ಸಹಾಯಧನ: ಘಟಕ ವೆಚ್ಚದ ಶೇ. 75 ರಷ್ಟು ಅಥವಾ ಗರಿಷ್ಟ ರೂ. 4.00 ಲಕ್ಷ.
ಲಾಭ: ಫುಡ್ ಬಿಸಿನೆಸ್ ಆರಂಭಿಸಲು ಬಯಸುವವರಿಗೆ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಅವಕಾಶ.
- ಹೈನುಗಾರಿಕೆ
ಉದ್ದೇಶ: ಹೈನುಗಾರಿಕೆ ಕೈಗೊಳ್ಳಲು 2 ಎಮ್ಮೆ ಅಥವಾ ಹಸುಗಳನ್ನು ಖರೀದಿಸುವುದು.
ಸಹಾಯಧನ: ಘಟಕ ವೆಚ್ಚದ ಶೇ. 50 ರಷ್ಟು ಅಥವಾ ಗರಿಷ್ಟ ರೂ. 1.25 ಲಕ್ಷ.
ಲಾಭ: ಗ್ರಾಮೀಣ ಪ್ರದೇಶದ ಜನರಿಗೆ ಹಾಲು ಉತ್ಪಾದನೆ ಮತ್ತು ಮಾರಾಟದ ಮೂಲಕ ನಿರಂತರ ಆದಾಯದ ಮೂಲ.
- ಇತರೆ ವಾಣಿಜ್ಯ ಉದ್ದೇಶಗಳು
ಉದ್ದೇಶ: ವಿವಿಧ ವ್ಯಾಪಾರ ಮತ್ತು ಇತರೆ ಸ್ವಾವಲಂಬಿ ಯೋಜನೆಗಳು.
ಸಹಾಯಧನ: ಘಟಕ ವೆಚ್ಚದ ಶೇ. 70 ರಷ್ಟು ಅಥವಾ ಗರಿಷ್ಟ ರೂ. 2.00 ಲಕ್ಷ.
ಲಾಭ: ವ್ಯಾಪಾರಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಬಯಸುವವರಿಗೆ ಸರಳ ಸಾಲ + ಸಬ್ಸಿಡಿ ಸೌಲಭ್ಯ.
ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಈ ಕೆಳಕಂಡಂತೆ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.
ವಿಶೇಷ ಸೂಚನೆ:2023-24 ಮತ್ತು 2024-25 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ರೈತರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-09-2025
ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ನೀಡಿ
https://sevasindhu.karnataka.gov.in
ಸೇವಾ ಸಿಂಧು ಪೋರ್ಟಲ್ ಅಥವಾ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅಕ್ಟೋಬರ್ 10ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9482 300 400 ಸಂಪರ್ಕಿಸಬಹುದು.
- KSRTC Free Driving Training 2026: ಎಸ್ಸಿ ಅಭ್ಯರ್ಥಿಗಳಿಗೆ ಉಚಿತ ಭಾರಿ ವಾಹನ ಚಾಲನಾ ತರಬೇತಿ – ಊಟ, ವಸತಿ ಉಚಿತ!
- IAS/IPS ಆಗುವ ಕನಸೇ? UPSC 2026 ಅಧಿಸೂಚನೆ ಬಂದಿದೆ, ಇಂದೇ ಅರ್ಜಿ ಸಲ್ಲಿಸಿ!
- Big Update : ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ 2026: ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ ಕಡ್ಡಾಯ ಸೂಚನೆ!
- ಆದರ್ಶ ವಿದ್ಯಾಲಯ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು – PDF Download
- India Post GDS 2026: ಅಂಚೆ ಇಲಾಖೆಯಲ್ಲಿ 28,000+ ಉದ್ಯೋಗಗಳು! 10ನೇ ತರಗತಿ ಪಾಸಾದವರಿಗೆ ಸುವರ್ಣ ಅವಕಾಶ

Just a heads up, if you’re looking to get into id888casino, id888login is where you go to login. Makes things easy, really. You can find them here: id888login