SuFromSo Movie Review Kannada: ನೈಜ ಹಳ್ಳೀ ಜೀವನ, ಹಾಸ್ಯ ಹಾಗೂ ಭಾವನೆಗಳ ಕಥೆ!
ಕನ್ನಡ ಚಿತ್ರರಂಗದಲ್ಲೆ ವಿಶಿಷ್ಟ ಹಾಸ್ಯಭರಿತ ಪ್ರಾಯೋಗಿಕ ಚಲನಚಿತ್ರ ಇದಾಗಿದ್ದು ಪ್ರೀತಿ, ಆತ್ಮ ಹಾಗೂ ದೆವ್ವ ನಂಬಿಕೆಗಳಿಗೂ ಹಾಸ್ಯವನ್ನು ಸೇರಿಸಿ ವಿಶಿಷ್ಟ ರೀತಿಯಲ್ಲಿ ನಿರೂಪಿಸಲಾಗಿದೆ. “ಸು ಫ್ರಮ್ ಸೋ” (Su From So) ಇತ್ತೀಚೆಗೆ ಬಿಡುಗಡೆಯಾಗಿ ಹಳ್ಳಿ ಸಂಸ್ಕೃತಿ-ಭಾವನೆಗಳನ್ನು ಜೊತೆಗೆ ಹಾಸ್ಯದಿಂದ ತುಂಬಾ ಚೆನ್ನಾಗಿ ಹೆಣೆದಿರುವ ಚಿತ್ರವೆಂದು ಪ್ರೇಕ್ಷಕರ, ವಿಮರ್ಶಕರ ಗಮನ ಸೆಳೆಯುತ್ತಿದೆ. ಕಥಾ ಅಯ್ಕೆ ಮತ್ತು ಗ್ರಾಮೀಣತೆಯ ವೈಶಿಷ್ಟ ಸು ಫ್ರಮ್ ಸೋ(ಸುಲೋಚನಾ ಫ್ರಮ್ ಸೋಮೇಶ್ವರ) ಚಿತ್ರದ ಹಿನ್ನಲೆಯು ಕರಾವಳಿಯ ಒಂದು ಗ್ರಾಮ ಇಲ್ಲಿ ಪ್ರತಿಯೊಂದು ವಿಷಯವು…
