ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ.ಜಾ/ಪ.ಪಂಗಡದವರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ (NCSC for SC/STs), ಬೆಂಗಳೂರು, ನಿರುದ್ಯೋಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ/ಯುವತಿಯರಿಗೆ ಅವಕಾಶವನ್ನು ಒದಗಿಸಿದೆ.
ಯೋಜನೆಯ ವಿವರ:
ಈ ಯೋಜನೆಯಡಿ, ಬೆಂಗಳೂರಿನಲ್ಲಿರುವ ನೋಂದಾಯಿತ ಹಾಗೂ ಪ್ರಸಿದ್ಧ ಸಂಸ್ಥೆಗಳಲ್ಲಿ ಒಂದು ವರ್ಷದ ಕಾಲಾವಧಿಯ ವಿಶೇಷ ತರಬೇತಿ ನೀಡಲಾಗುತ್ತದೆ. ತರಬೇತಿ ವಿಷಯಗಳಲ್ಲಿ ಇವುಗಳಿವೆ:
• ಸಾಮಾನ್ಯ ಇಂಗ್ಲಿಷ್
• ಸಾಮಾನ್ಯ ಜ್ಞಾನ
• ಕಂಪ್ಯೂಟರ್ ಜ್ಞಾನ
• ನ್ಯೂಮೆರಿಕಲ್ ಅಬಿಲಿಟಿ
• ಶಾರ್ಟ್‌ಹ್ಯಾಂಡ್ / ಸ್ಟೆನೋಗ್ರಾಫಿ (ಶೀಘ್ರಲಿಪಿ)
ಪ್ರತಿ ಅರ್ಹ ಅಭ್ಯರ್ಥಿಗೆ ನಿಗದಿತ ಸೇವಾ ಶುಲ್ಕವನ್ನು ಕೂಡ ಸರ್ಕಾರವೇ ಭರಿಸುತ್ತಿದೆ.
ಅರ್ಜಿ ಸಲ್ಲಿಸಲು:
ಅಭ್ಯರ್ಥಿಗಳು ಅರ್ಜಿಯನ್ನು ಕೆಳಗಿನ ಇಮೇಲ್ ವಿಳಾಸಕ್ಕೆ ಅಥವಾ ನೋಂದಾಯಿತ ಪೋಸ್ಟ್ ಮೂಲಕ ಕಚೇರಿಗೆ ಖುದ್ದಾಗಿ ಹಾಜರಾಗಿ ಸಲ್ಲಿಸಬಹುದು. ಅಂತಿಮ ದಿನಾಂಕ: 30-05-2025 ಸಂಜೆ 5:00.
ವಿಳಾಸ:
ಪ.ಜಾ/ಪ.ಪಂಗಡದವರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ
ಸರ್ಕಾರಿ ಐಟಿಐ ಆವರಣ, ಡೈರಿ ಸರ್ಕಲ್,
ಭನ್ನೇರುಘಟ್ಟ ರಸ್ತೆ, ಬೆಂಗಳೂರು – 560029, ಕರ್ನಾಟಕ.
ಇಮೇಲ್: cgcempbg@nic.in
ದೂರವಾಣಿ: 080-29756192
ಅವಕಾಶಗಳ ಕನಸನ್ನು ಸಾಕಾರಗೊಳಿಸುವತ್ತ ನಿಮ್ಮ ಮೊದಲ ಹೆಜ್ಜೆ ಇಡಿ ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ!
