ಮುಖ್ಯಾಂಶಗಳು

KSOU Application 2025 – ನೀವು ಮನೆಯಲ್ಲಿಯೇ ನಿಮ್ಮ ಪದವಿಯನ್ನು ಪೂರ್ಣಗೊಳಿಸಬಹುದು.

KSOU mysore

KSOU Mysore : ಮೈಸೂರು ಮೂಲದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (KSOU) ತನ್ನ ಸಾಂಪ್ರದಾಯಿಕ ಮುಕ್ತ ದೂರ ಶಿಕ್ಷಣ ಕೋರ್ಸ್‌ಗಳು ಮತ್ತು ರಾಜ್ಯಾದ್ಯಂತ ಆನ್‌ಲೈನ್ ಕೋರ್ಸ್‌ಗಳನ್ನು ರಾಷ್ಟ್ರವ್ಯಾಪಿ ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಿದೆ. ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು (ಪ್ರೊಗ್ರಾಂಗಳನ್ನು) ಏಕ ಕಾಲದಲ್ಲಿ ಓದಲು ಅವಕಾಶವಿರುತ್ತದೆ ಹಾಗೆ, ಇಂಟರ್ನ್ ಶಿಪ್ ಮೂಲಕ ಸ್ಟೆಫೆಂಡ್ ಗಳಿಸುವ ಅವಕಾಶಗಳಿವೆ. 2024-25 ರ ಜನವರಿ ಆವೃತ್ತಿಗೆ ಪ್ರಥಮ ವರ್ಷದ ಒಡಿಎಲ್ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಮತ್ತು ವೃತ್ತಿಪರರಾಗಿ ಕೆಲಸ ಮಾಡುವವರು, ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟವರು, ಕಲಿಯಲು ಇಚ್ಛಿಸುವವರು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು.

KSOU Mysore – ಪ್ರವೇಶಾತಿ ಮಾಹಿತಿ ಹಾಗೂ ವಿಧಾನ :

  • ಅರ್ಹತೆಯ ಮಾನದಂಡ ಹಾಗೂ ಶುಲ್ಕದ ವಿವರಗಳನ್ನು ಕೆಳಗೆ ವಿವರಣೆ PDF ನಲ್ಲಿ ನಮೂದಿಸಲಾಗಿದೆ. ಆನ್‌ಲೈನ್ ಪ್ರವೇಶ ಅರ್ಜಿ ಫಾರಂನ್ನು ಭರ್ತಿ ಮಾಡಲು KSOU Online Admission Portal ಗೆ ಭೇಟಿ ನೀಡಿ, ಪ್ರವೇಶಾತಿ ಹಾಗೂ ಇನ್ನಿತರ ಮಾಹಿತಿಗಾಗಿ ಅರ್ಜಿದಾರರು KSOU ಅಧಿಕೃತ ವೆಬ್‌ ಸೈಟ್: www.ksoumysuru.ac.in ನ್ನು ವೀಕ್ಷಿಸುವುದು. ಪ್ರವೇಶಪೂರ್ವ ಸಮಾಲೋಚನೆಗೆ ಮಾತ್ರ ಅರ್ಜಿದಾರರು ತಮ್ಮ ವ್ಯಾಪ್ತಿಯಲ್ಲಿ ಬರುವ KSOU ಪ್ರಾದೇಶಿಕ ಆಡಳಿತ ಕಚೇರಿ ಸಹಾಯ ಸಂಪರ್ಕಿಸಬಹುದು.
  • ಪ್ರವೇಶ ಶುಲ್ಕವನ್ನು ಆನ್‌ಲೈನ್ ವಿಧಾನದ ಮೂಲಕ ಮಾತ್ರ ಪಾವತಿಸತಕ್ಕದ್ದು.
  • ಅಭ್ಯರ್ಥಿಗಳು ಗುರುತಿನ ಚೀಟಿಗಳು ಹಾಗೂ ಲಭ್ಯ ಸ್ವಯಂ ಕಲಿಕಾ ಸಾಮಗ್ರಿಗಳನ್ನು ಮೈಸೂರಿನಲ್ಲಿರುವ KSOU ಆಡಳಿತ ಕಛೇರಿಯಿಂದ ಅಥವಾ ತಮ್ಮ ಆಯ್ಕೆಯ ಪ್ರಾದೇಶಿಕ ಕೇಂದ್ರದಿಂದ ಪಡೆಯಬಹುದು.
  • SC/ST ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ನಿಗಧಿತ ಶುಲ್ಕವನ್ನು ಪಾವತಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಪರುಭರಿಕೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ಶುಲ್ಕ ಯೋಜನೆಯಡಿ ಪ್ರವೇಶಾತಿ ಪಡೆಯಬಹುದಾಗಿದೆ. ಪ್ರವೇಶಾತಿಯು ವಿ.ವಿ.ಯ ಸ್ಕಾಲರ್‌ಷಿಪ್ ಘಟಕವು ವಿಧಿಸುವ ಷರತ್ತಿಗೆ ಒಳಪಟ್ಟಿರುತ್ತದೆ.
  • OBC ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಪೂರ್ಣ ಶುಲ್ಕವನ್ನು ಪಾವತಿಸಿ ಪ್ರವೇಶಾತಿ ಪಡೆದು, ನಂತರ ಸ್ಟೇಟ್ ಸ್ಕಾಲರ್‌ಷಿಪ್ ಪೋರ್ಟಲ್ (SSP) ಮುಖಾಂತರ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕವನ್ನು ಮರುಭರಿಕೆ ಮಾಡಿಕೊಳ್ಳಬಹುದು.
  • ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳು / ಮಿಲಿಟರಿ ಸೇವೆಯಲ್ಲಿರುವ / ಮಾಜಿ ಸೈನಿಕ ವಿದ್ಯಾರ್ಥಿಗಳು / ಆಟೋ / ಕ್ಯಾಬ್ ಚಾಲಕರು ಮತ್ತು ಅವರ ಪತ್ನಿ / ಮಕ್ಕಳಿಗೆ / ಕೆಎಸ್‌ಆರ್‌ಟಿಸಿ / ಬಿಎಂಟಿಸಿ /ಎನ್‌ಡಬ್ಲ್ಯೂಕೆಆರ್‌ಟಿಸಿ / ಕೆಕೆಆರ್‌ಟಿಸಿಯಲ್ಲಿನ ನೌಕರರುಗಳಿಗೆ ಯುಜಿ ಮತ್ತು ಪಿಜಿ ಪದವಿ ಶಿಕ್ಷಣ ಕ್ರಮಗಳಿಗೆ ಬೋಧನಾ ಶುಲ್ಕದಲ್ಲಿ ಶೇಕಡ 10%ರಷ್ಟು ರಿಯಾಯಿತಿಯನ್ನು ಪಡೆಯಬಹುದು.
  • ತರಗತಿ ಹಾಗೂ ಪರೀಕ್ಷೆಗಳನ್ನು ಪ್ರಾದೇಶಿಕ ಕೇಂದ್ರ ಅಥವಾ ಕಲಿಕೆ ಸಹಾಯ ಕೇಂದ್ರಗಳಲ್ಲಿ ನಡೆಸಲಾಗುವುದು.

ಕೋರ್ಸ್‌ಗಳ ಬಗ್ಗೆ ಮಾಹಿತಿ :

ksou mysore

ಅರ್ಜಿ ಸಲ್ಲಿಸುವ ಮೊದಲು ದಯವಿಟ್ಟು ಕೆಳಗಿನ ಎಲ್ಲಾ ಲಿಂಕ್‌ಗಳಿಗೆ ಹೋಗಿ ಓದಿ ಅರ್ಥಮಾಡಿಕೊಂಡು ನಂತರ ಅರ್ಜಿ ಸಲ್ಲಿಸಿ

ಪ್ರವೇಶಾತಿಯ ಪ್ರಾರಂಭದ ದಿನಾಂಕ >>>>>>>10-02-2025
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ (ಇಲ್ಲಿ ಕ್ಲಿಕ್ ಮಾಡಿ) >>>>>>>https://www.ksoumysuru.ac.in/
ಪ್ರವೇಶಕ್ಕೆ ಅರ್ಜಿ ಸಲ್ಲಿಸಲು (ಇಲ್ಲಿ ಕ್ಲಿಕ್ ಮಾಡಿ) >>>>>>>https://ksouportal.com/Views/ApplicantLogin.aspx
ಶುಲ್ಕ ವಿವರಗಳಿಗಾಗಿ (ಇಲ್ಲಿ ಕ್ಲಿಕ್ ಮಾಡಿ) >>>>>>>https://ksouportal.com/attachment_help/2024-25%20jan%20cycle%20odl%20program.pdf
ಅಧಿಸೂಚನೆಗಾಗಿ (ಇಲ್ಲಿ ಕ್ಲಿಕ್ ಮಾಡಿ) >>>>>>> https://ksouportal.com/attachment_help/Fee_structure2024_25.pdf
ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ (ಇಲ್ಲಿ ಕ್ಲಿಕ್ ಮಾಡಿ) >>>>>>>https://ksouportal.com/attachment_help/Admission_Steps.pdf
ಆನ್‌ಲೈನ್ ಪ್ರವೇಶ ವಿವರಗಳು ಮತ್ತು ಬಳಕೆದಾರರ ಕೈಪಿಡಿ (ಇಲ್ಲಿ ಕ್ಲಿಕ್ ಮಾಡಿ) >>>>>>>https://ksouportal.com/attachment_help/StudentUserManual.pd

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.