ಡಿಸೆಂಬರ್ 29 ರಿಲೀಸ್ ಆಗಿರುವಂತಹ ಕನ್ನಡ ಸಿನಿಮಾ ಕಾಟೇರ ಉಳುವವನೇ ಭೂಮಿಯ ಒಡೆಯ ಬಂದ 1970ರ ಸಂದರ್ಭದ ಒಂದು ನೈಜ ಚಲನಚಿತ್ರವಾಗಿದೆ. ಭೀಮನಹಳ್ಳಿ ಎಂಬ ಊರಿನಿಂದ ಶುರುವಾಗುವ ಸಿನಿಮಾ ಜಮೀನ್ದಾರಿ ಪದ್ಧತಿ ಇದ್ದ ಸಂದರ್ಭದಲ್ಲಿ ಸರ್ಕಾರವು ಉಳಿಯವನು ಭೂಮಿಯ ಒಡೆಯ ಕಾಯ್ದೆಯನ್ನು ಅಂಗೀಕಾರಗೊಳಿಸುತ್ತದೆ. ಮಾಹಿತಿಯನ್ನು ಪತ್ರಿಕೆಯಲ್ಲಿ ಓದಿದ ಒಬ್ಬ ವಿದ್ಯಾವಂತ ಹೆಣ್ಣು ಊರಿನ ಜನತೆಗೆ ತಿಳಿಸುತ್ತಾಳೆ. ರೈತರು ನಂಬುವುದಿಲ್ಲ ಮುಂದಿನ ದಿನಗಳಲ್ಲಿ ಮೇಲ್ವರ್ಗದವರ ದಬ್ಬಾಳಿಕೆ ಹೆಚ್ಚುತ್ತ ಹೋಗಿದಾಗ ಕೆಳಗಿನವರ(ರೈತರ) ಆಕ್ರೋಶವು ಹೆಚ್ಚುತ್ತಾ ಹೋಗುತ್ತದೆ. ಮುಂದಿನ ದಿನಗಳಲ್ಲಿ ಉಳುವವನೇ ಭೂಮಿಯ ಒಡೆಯ ಕಾಯ್ದೆಯ ಬಗ್ಗೆ ಸಂಪೂರ್ಣ ತಿಳಿಯುತ್ತದೆ.
ರೈತರ ಆ ದಿನಗಳ ಸಮಸ್ಯೆಗಳಾದ ತೆರಿಗೆ ವಸೂಲಿ, ಜಾತಿ ಸಮಸ್ಯೆ, ಮೇಲ್ವರ್ಗಗಳ ದಬ್ಬಾಳಿಕೆಯ ವಿರುದ್ಧ ರೈತರ ಎಲ್ಲರೂ ಎದ್ದು ನಿಲ್ಲುತ್ತಾರೆ ಈ ಎಲ್ಲಾ ಸಮಸ್ಯೆಗಳ ಹೋರಾಟದ ಮುಂದಾಳತ್ವ ಕಾಟೇರ ಇರುತ್ತಾನೆ. ಈ ಸಿನಿಮದ ಮೂಲಕ ಯಾಕೆ ಮಹಿಳಾ ಶಿಕ್ಷಣ ಯಾಕೆ ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳುತ್ತೇವೆ ಯಾಕೆಂದರೆ ಆ ಚಿತ್ರದ ನಾಯಕಿ ಅವರಿಗೆ ಕಾಯ್ದೆಯ ಮಾಹಿತಿ ನೀಡದಿದ್ದರೆ ಅವರಿಗೆ ಗೊತ್ತೇ ಆಗುತ್ತಿರಲಿಲ್ಲ. ಈಗೆ ಮುಂದೆ ಸಿನಿಮಾ ಜನರಿಗೆ ಬೇರೆ ಬೇರೆ ರೀತಿಯ ಸಾಮಾಜಿಕ ಪಿಡುಗುಗಳಾದ ಜಾತಿ, ಜಮೀನ್ದಾರಿ ಪದ್ಧತಿ, ಮರ್ಯಾದ ಹತ್ಯೆ ಈಗೆ ಸಾಕಷ್ಟು ವಿಷಯ ತಿಳಿಸುವ ಸಿನಿಮಾ ಪ್ರತಿ ಮಾತು ಮಾತಿನಲ್ಲೂ ಸಾಕಷ್ಟು ವಿಷಯ ತಿಳಿಸುತ್ತ ಹೋಗುತ್ತದೆ.
ಪ್ರತಿ ಸನ್ನಿವೇಶಗಳನ್ನು ನೈಜವಾಗಿ ತೋರಿಸಲಾಗಿದೆ. ಕನ್ನಡ ಚಿತ್ರರಂಗಕ್ಕೆ ಒಂದು ನೈಜ ವಿಷಯಧಾರಿತ ಸಿನಿಮಾಗಳನ್ನು ಸ್ಟಾರ್ ನಟರು ಮಾಡದ ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿರುವುದರಿಂದ ದೊಡ್ಡ ಮಟ್ಟದಲ್ಲಿ ದೇಶದಾದ್ಯಂತ ಸಿನಿಮಾ ತಲುಪುತ್ತಿದೆ. ಕನ್ನಡದಲ್ಲಿ ಸಾಮಾಜಿಕ ಪಿಡುಗುಗಳ, ರೈತ ವರ್ಗದ, ಕೆಳ ಮಧ್ಯಮ ವರ್ಗದ ಜನರ ನೈಜ ಪರಿಸ್ಥಿತಿ ಬಗ್ಗೆ ಸಿನಿಮಾ ಕೇಳುತ್ತಿದ್ದ ಒಂದು ವರ್ಗಕ್ಕೆ ವಿಷಯವಾಧರಿತ ಸಿನಿಮಾ ಇಷ್ಟವಾಗುವುದಂತು ಖಂಡಿತ. ತಮಿಳಿನ ಅಸುರನ್, ಜೈ ಭೀಮ್, ಸರ್ಪಟ್ಟ ಪರಂಬರೈ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದ ಕರ್ನಾಟಕದ ಜನತೆಗೆ ಕನ್ನಡದಲ್ಲೆ ಈ ಕಾಟೇರ ಕಮರ್ಷಿಯಲ್ ಜೊತೆಗೆ ಮಹೋನ್ನತ ವಿಷಯಧಾರಿತವಾಗಿ ಬಂದಿರುವುದು ಕನ್ನಡ ಚಿತ್ರರಂಗ ಒಂದು ಹೊಸ ಮಾರ್ಗ ತೋರಿದಂತಿದೆ. ದೊಡ್ಡ ಮಟ್ಟದ ಮೈಲುಗಲ್ಲನ್ನು ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.