ಮುಖ್ಯಾಂಶಗಳು

ಸುಲಭವಾಗಿ Gruhalakshmi ಪ್ರತಿ ತಿಂಗಳ ಹಣ ಚೆಕ್ ಮಾಡಿ.

ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯದಂತಹ ಗೃಹಲಕ್ಷ್ಮಿ(Gruha) ಯೋಜನೆಯ ಹಣ ಜಮಾ ಆಗಿರುವ ಮಾಹಿತಿ ಸಿಗುವ ಸರ್ಕಾರದ ಆಪ್ DBT. ಈ ಆಪ್ ನ ಮುಖಾಂತರ ಗೃಹಲಕ್ಷ್ಮಿ ಹಣ ಜಮಾ ಆಗಿದಿಯ ಇಲ್ಲವ ಎಂದು ಸುಲಭವಾಗಿ ಚೆಕ್ ಮಾಡಬಹುದು.
ಚೆಕ್ ಮಾಡುವುದು ಹೇಗೆ ಎಂದು ಇಲ್ಲಿ ಸುಲಭವಾಗಿ ವಿವರಿಸಲಾಗಿದೆ.

App link: ಇಲ್ಲಿ ಕ್ಲಿಕ್ ಮಾಡಿ ನೀವು ಡೌನ್ಲೋಡ್ ಮಾಡಿಕೊಳ್ಳ ಬಹುದು.

👇👇👇👇

ಡೌನ್ಲೋಡ್ ಮಾಡಿ

Step 1: ಮೊದಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೋಗಿ DBT ಎಂದು ಸರ್ಚ್ ಮಾಡಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step 2: ಆಪ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ ನಂತರ ಓಪನ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.

Step 3: ನಂತರ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಂದು OTP ಸಂಖ್ಯೆ ಬರುತ್ತದೆ. ಆ ಸಂಖ್ಯೆಯನ್ನು ನಮೂದಿಸಬೇಕು, ಜೊತೆಗೆ ಯುನಿಕ್ ಒಂದು ಪಿನ್ನನ್ನು ಹಾಕಿ ಸಬ್ಮಿಟ್ (Submit) ಮಾಡಬೇಕು.

Step 4: ನಂತರ ನಿಮ್ಮ ನಿಮ್ಮ ಆಧಾರ್ ಕಾರ್ಡ್ ಲಾಗಿನ್ ಆಗಿರುತ್ತದೆ.

Step 5: ಅಲ್ಲಿ Payment Status ಆಕ್ಷನ್ ಅನ್ನು ಸೆಲೆಕ್ಟ್ ಮಾಡಿದರೆ. ನಿಮಗೆ ಗೃಹಲಕ್ಷ್ಮಿ ಹಣದ ಮಾಹಿತಿ ಸಿಗುತ್ತದೆ.

ಒಂದು ಬಾರಿ ಲಾಗಿನ್ ಆಗಿದ್ದರೆ ಸಾಕು ಮತ್ತೆ ಪೇಮೆಂಟ್ ಸ್ಟೇಟಸ್ ನೋಡಲು ಬಂದಾಗ ನಿಮ್ಮ ಹೆಸರನ್ನು ಸೆಲೆಕ್ಟ್ ಮಾಡಿ ನಿಮ್ಮ ಯೂನಿಕ್ ಪಿನ್ನನ್ನು ಟೈಪ್ ಮಾಡಿದರೆ ಸಾಕು ನೀವು ಡೈರೆಕ್ಟಾಗಿ ಲಾಗಿನ್ ಆಗಬಹುದು.

DBT ಈ ಆಪ್ ಸರ್ಕಾರದ ಎಲ್ಲಾ ರೀತಿಯ ಯೋಜನೆಯ ಹಣ ಸಂದಾಯವಾಗಿರುವ ಮಾಹಿತಿಯನ್ನು ನೀಡುತ್ತದೆ. ಎಲ್ಲಾ ರೀತಿಯ ಸರ್ಕಾರದ ಸ್ಕಾಲರ್ಶಿಪ್, ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಇನ್ನಿತರ ಎಲ್ಲಾ ರೀತಿಯ ಹಣ ಜಮಾ ಆಗಿರುವ ಸ್ಟೇಟಸ್ ಅನ್ನು ಚೆಕ್ ಮಾಡಲು ಬಳಸಬಹುದು.

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.