ಮುಖ್ಯಾಂಶಗಳು

D-ಮೀಸಲಾತಿ ಅಂತಹ ಯಾವುದೇ ಮೀಸಲಾತಿ ಇಲ್ಲ…!

ಸಾಕಷ್ಟು ಮಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ 2019 ರ ಕಾಯಿದೆ ಪ್ರಕಾರ ಅಧ್ಯಾಯ 10 ನ್ನು de-reservation ಗಾಗಿಯೇ ಇಟ್ಟಿದೆ. ಅಂದರೆ ಮೀಸಲಾತಿಯನ್ನು ಕೊನೆಗಾಣಿಸುವುದು ಹೇಗೆ ಎಂದು ಪ್ರಸ್ತಾಪಿಸಿದೆ. ಅದರ ಪ್ರಕಾರ ಉನ್ನತ ಶಿಕ್ಷಣದಲ್ಲಿ ಗ್ರೂಪ್ A,B,C,D ಹುದ್ದೆಗಳಿಗೆ SC,ST,OBC ವ್ಯಕ್ತಿಗಳಿಂದ ಅಭ್ಯರ್ಥಿಗಳು ದೊರಕದಿದ್ದರೆ, ಅಂತಹ ಹುದ್ದೆಗಳನ್ನು ಅವರಿಗೆ ಮುಂದೆ ಮೀಸಲಿಡದೆ ಇತರೆ ಜಾತಿ/ವರ್ಗಗಳಿಗೆ ರವಾನಿಸುವ ಪ್ರಸ್ತಾವವನ್ನು ಮುಂದಿಟ್ಟಿದೆ ಎಂದು ಸುದ್ದಿ ಓಡಡುತ್ತಿತ್ತು.

ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ (CEI) ಕೇಂದ್ರ ಶಿಕ್ಷಣ ಸಂಸ್ಥೆಗಳ (ಶಿಕ್ಷಕರ ವರ್ಗದಲ್ಲಿ ಮೀಸಲಾತಿ) ಕಾಯಿದೆ, 2019 ರ ಪ್ರಕಾರ ಶಿಕ್ಷಕರ ವರ್ಗದ ನೇರ ನೇಮಕಾತಿಯಲ್ಲಿ ಎಲ್ಲಾ ಹುದ್ದೆಗಳಿಗೆ ಮೀಸಲಾತಿಯನ್ನು ಒದಗಿಸಲಾಗಿದೆ.
ಈ ಕಾಯಿದೆಯನ್ನು ಜಾರಿಗೊಳಿಸಿದ ನಂತರ, ಯಾವುದೇ ಮೀಸಲು ಹುದ್ದೆಯನ್ನು ಕಾಯ್ದಿರಿಸಲಾಗುವುದಿಲ್ಲ. 2019 ರ ಕಾಯಿದೆ ಪ್ರಕಾರ ಕಟ್ಟುನಿಟ್ಟಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಸಚಿವಾಲಯವು ಎಲ್ಲಾ CEI ಗಳಿಗೆ ನಿರ್ದೇಶನಗಳನ್ನು ನೀಡಿದೆ. ಎಂದು Ministry of Education ಬರೆದುಕೊಂಡಿದೆ.

ಇದಕ್ಕೆ ಯುಜಿಸಿ ಅಧ್ಯಕ್ಷರು ಆದಂತಹ ಜಗದೇಶ್ ಕುಮಾರ್ ಅವರು UGC INDIA ‘X’ ಅಕೌಂಟ್ ನ ಮೂಲಕ “ಈ ಹಿಂದೆ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ (ಸಿಇಐ) ಯಾವುದೇ ಮೀಸಲಾತಿ ವರ್ಗದ ಹುದ್ದೆಗಳ ಮೀಸಲಾತಿಯನ್ನು ರದ್ದುಗೊಳಿಸಿಲ್ಲ ಮತ್ತು D-ಮೀಸಲಾತಿ ಅಂತಹ ಯಾವುದೇ ಮೀಸಲಾತಿ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುವುತ್ತೇವೆ. ಕಾಯ್ದಿರಿಸಿದ ವರ್ಗದ ಹುದ್ದೆಗಳನ್ನು ಸಂಬಂಧಪಟ್ಟ ಪ್ರಯತ್ನಗಳ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.