BMTC Free Driving Training Online Application: ಬೆಂ.ಮ.ಸಾ.ಸಂಸ್ಥೆಯು(BMTC), ಕರ್ನಾಟಕ ಸರ್ಕಾರದ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್.ಸಿ.ಎಸ್.ಪಿ) ಹಾಗೂ ಗಿರಿಜನ ಉಪ ಯೋಜನೆ (ಟಿ.ಎಸ್.ಪಿ) ಯೋಜನೆಯಡಿ ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್.ಟಿ)ಗಳ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿಯ (ವಸತಿ ಸಹಿತ / ವಸತಿ ರಹಿತ) ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ. ಸದರಿ ತರಬೇತಿಯನ್ನು ಪಡೆಯಲು ಇಚ್ಚಿಸುವ ಪರಿಶಿಷ್ಟ ಜಾತಿ(ಎಸ್.ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್.ಟಿ)ಗಳ ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಠ ಅರ್ಹತೆಗಳು/ಸಲ್ಲಿಸಬೇಕಾಗಿರುವ ದಾಖಲಾತಿಗಳ ವಿವರ ಕೆಳಗೆ ನೀಡಲಾಗಿದೆ.
ಲಘು ವಾಹನ(ಕಾರ್/ಜೀಪ್) ಚಾಲನಾ ತರಬೇತಿಗಾಗಿ : ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು.
ಭಾರಿ ವಾಹನ(ಬಸ್) ಚಾಲನಾ ತರಬೇತಿಗಾಗಿ:
ಕನಿಷ್ಠ 20 ವರ್ಷ ಮತ್ತು ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು ಮತ್ತು ಲಘು ವಾಹನ ಚಾಲನಾ ಅನುಜ್ಞಾಪತ್ರ ಪಡೆದು ಒಂದು ವರ್ಷ ಪೂರ್ಣಗೊಂಡಿರಬೇಕು.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಪಾಸ್‌ಪೋರ್ಟ್ ಅಳತೆಯ 5 ಭಾವಚಿತ್ರ
ಸೂಚನೆಗಳು:
1. ಮೊದಲು ಬಂದವರಿಗೆ, ಮೊದಲ ಆದ್ಯತೆಯ ಮೇರೆಗೆ, ಅರ್ಹ ಅಭ್ಯರ್ಥಿಗಳಿಗೆ ಲಘು/ಭಾರಿ ವಾಹನ ಚಾಲನಾ ತರಬೇತಿ ನೀಡಲಾಗುತ್ತದೆ.
2. ವಸತಿ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ (ನಿಗದಿತ ಸಂಖ್ಯೆಯಂತೆ) ತರಬೇತಿ ಅವಧಿಯಲ್ಲಿ ವಸತಿ ಸೌಕರ್ಯ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ನೀಡಲಾಗುತ್ತದೆ.
3. ಆಸಕ್ತಿ ಇರುವ ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್
(ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ )
ಮೇಲಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಪೋರ್ಟಲ್ ಸಹಾಯ ಕೇಂದ್ರದ ಸಂಪರ್ಕ ಸಂಖ್ಯೆ: 08022279954, 8792662814/ 8792662816
4. ತರಬೇತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಸ್ಥೆಯ ವೆಬ್ ಸೈಟ್ www.mybmtc.gov.in ನಿಂದ ಮತ್ತು ದೂರವಾಣಿ: 6364858520 / 7760991085 ಪಡೆಯಬಹುದು.
5. ತರಬೇತಿಗೆ ಹಾಜರಾಗುವ ವೇಳೆಯಲ್ಲಿ ಅಭ್ಯರ್ಥಿಗಳು ಮೇಲಿನ ತಮ್ಮ ಮೂಲ ದಾಖಲೆ(ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಭಾವಚಿತ್ರ), ಸೇವಾ ಸಿಂಧು ಪೋರ್ಟಲ್ ನಲ್ಲಿ ಮುದ್ರಿತ ಅರ್ಜಿ ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗುವುದು.

- Ambedkar Writings and Speeches in English: Exploring the Writings and Speeches of Dr. B.R. Ambedkar
- Ambedkar Writings and Speeches in Kannada: ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು 22 ಸಂಪುಟಗಳು ಕನ್ನಡದಲ್ಲಿ ಲಭ್ಯ!
- What to do after 2nd PUC ?: ದ್ವಿತೀಯ ಪಿಯುಸಿ ನಂತರ ಏನು ಮಾಡಬೇಕು?
- 2nd PUC Result 2025 Karnataka: ದ್ವಿತೀಯ ಪಿಯುಸಿ ಫಲಿತಾಂಶ ಇಲ್ಲಿ ನೋಡಿ! – Direct Link
- Indian Navy New Recruitment 2025: ಭಾರತೀಯ ನೌಕಾಪಡೆಯಲ್ಲಿ ಆಗ್ನಿವೀರ್ ನೇಮಕಾತಿ ಅರ್ಜಿ ಆಹ್ವಾನ!