ಮುಖ್ಯಾಂಶಗಳು

Bheema Movie Review:ಭೀಮ ನೈಜತೆಯ ಕರಾಳ ದರ್ಶನ!

ಆಗಸ್ಟ್ 11 ಶುಕ್ರವಾರ ರಂದು  ಸ್ಯಾಂಡಲ್‌ವುಡ್ ಸಲಗ ನಟ, ನಿರ್ದೇಶಕ ವಿಜಯ್‌ ಕುಮಾರ್ (ದುನಿಯಾ ವಿಜಿ) ಅವರು ನಿರ್ದೇಶಿಸಿ ನಟಿಸಿರುವ ‘ಭೀಮ’ ಸಿನಿಮಾ ಮಾಸ್‌ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ  ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಈ ಸಿನಿಮಾವು ಬೆಂಗಳೂರಿನ ಗಾಂಜಾ ಮಾರಾಟ ಜಾಲಕ್ಕೆ ಹುಡುಗರು ಹೇಗೆ ಬಳಕೆಯಾಗುತ್ತಿದ್ದಾರೆ ಮತ್ತು ನಗರದ ಯುವಕರು ಮಾದಕ ವ್ಯಸನಿಗಳಾಗಿ ಬದುಕನ್ನೇ ಹೇಗೆ ಕಳೆದುಕೊಳ್ಳುತ್ತಿದ್ದಾರೆ. ಮತ್ತು ಈ ದೊಡ್ಡ ದಂದೆಯನ್ನ ನಿಲ್ಲಿಸಲು ಭೀಮ ಮತ್ತು ಡ್ರ್ಯಾಗನ್ ಮಂಜು ನಡುವೆ ಸಂಘರ್ಷ. ಈ ಇಬ್ಬರು ಯಾರು ದಂದೆ ಶುರುವಾಗಿದ್ದು ಹೇಗೆ,  ಭೀಮನ ಹೋರಾಟ ಏನಾಯ್ತು ಎಂದು ತಿಳಿಸುತ್ತದೆ.

ಈ ಡ್ರಗ್ ಮಾಫಿಯಾ ಕಥೇನ ಇವರು  ಸರಿಯಾದ ಸಂಶೋಧನೆ ಮಾಡಿ ನೈಜ್ಯತೆಯನ್ನು, ತಮ್ಮ ಬರವಣಿಗೆಯಲ್ಲಿ ಅಳವಡಿಸಿಕೊಂಡು ದುನಿಯಾ ವಿಜಯ್ ಅವರು ತೆರೆಮೇಲೆ ತಂದಿರುವುದು ಸಿನಿಮಾ ನೋಡಿರುವವರಿಗೆ ಅವರ ಶ್ರಮ ಮತ್ತು ಕೆಲಸ ಇಷ್ಟವಾಗಿದೆ. ಭೀಮ ಸಿನಿಮಾದಲ್ಲಿ ಈಗಿನ ಸಮಾಜದಲ್ಲಿ ಮತ್ತು ಹೆಚ್ಚಾಗಿ  ಬೆಂಗಳೂರಿನಲ್ಲಿ ಮತ್ತು ದೇಶದ ಇತರೆ ನಗರಗಳಲ್ಲಿ ನಡೆಯುತ್ತಿರುವ ಗಂಭೀರ ವಿಚಾರದ ಬಗ್ಗೆ ತೋರಿಸಿದ್ದಾರೆ. ಮತ್ತು ನಮ್ಮ ಶ್ರೀಮಂತ ಸಿಲಿಕಾನ್ ಸಿಟಿ , ಐ.ಟಿ ಹಬ್ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಚ್ಚಾ ಬೆಂಗಳೂರಿನ ಗಲ್ಲಿ-ಗಲ್ಲಿಗಳಲ್ಲಿ ಅಡಗಿರುವ ನೈಜ ಕೃತ್ಯಗಳನ್ನ ಯಾವ ಚಿತ್ರಗಳಲ್ಲಿ ಇಷ್ಟು ನೈಜ ತೋರಿಸಿಲ್ಲ. ಮತ್ತು ಇಲ್ಲಿ ನಟಿಸಿರುವ ಸುಮಾರು ಮುಕ್ಕಾಲು ಜನರು ಬೆಂಗಳೂರಿನಲ್ಲಿ ಈ ಸಿನಿಮಾ ಚಿತ್ರಿಸಿರುವ ಸ್ಥಳದಲ್ಲಿ ಜೀವನ ನಡೆಸುತ್ತಿರುವ ಯುವಕರು, ಯುವತಿಯರು ಮತ್ತು ಸ್ಥಳೀಯರನ್ನು ಬಳಸಿ ಸ್ಥಳೀಯ ನೈಜತೆಯಗಿ ತೋರಿಸಿರುವುದು ಚೆನ್ನಾಗಿದೆ. ಇದರ ಮೊದಲು ಛಾಪು  ನೀಡುವ ಅಂಶವೆಂದರೆ ಸಂಗೀತ ಚರಣ್ ರಾಜ್ ಮತ್ತು ದುನಿಯಾ ವಿಜಯ್ ಅವರ ಸಂಯೋಜನೆ ಶುರುವಿಂದ ಸಿನಿಮಾದ ಅಂತ್ಯದವರೆಗೂ, ವಿಶೇಷವಾಗಿ ಸಿನಿಮಾ ಅಂತ್ಯದ ಸುಮಾರು ಕೊನೆಯ 40 ನಿಮಿಷ ಚಿತ್ರಮಂದಿರದಲ್ಲಿದ್ದ ಪ್ರೇಕ್ಷಕರಿಗೆ ಅತ್ಯುತ್ತಮವಾಗಿ ಬಂದಿದೆ. ಈ ಇಬ್ಬರ ಸಂಯೋಜನೆ ಸಿನಿಮಾವನ್ನ ಮೇಲೇತಲ್ಲೂ ಸಹಾಯ ಮಾಡಲಿದೆ.

ಈ ಸಿನಿಮಾದಲ್ಲಿ ಬಹಳಷ್ಟು ಕಲಾವಿಧರು ನಾನಾ ಪತ್ರದಲ್ಲಿ ನಟಿಸಿದ್ದಾರೆ ಆದರೆ ಬಹಳ ಪ್ರಭಾವ ಮತ್ತು ಇಷ್ಟವಾದ ಕಲಾವಿದನ ಪಾತ್ರದಲ್ಲಿ ಮೊದಲನೆಯವರು ಭೀಮ (ದುನಿಯಾ ವಿಜಯ್). ದುನಿಯಾ ವಿಜಯ್ ಅವರು ತಮ್ಮ ನಿರ್ದೇಶನೇ ಮತ್ತು ನಟನೆಯಲ್ಲಿ ತನ್ನ ಪ್ರಮುಖ ಪಾತ್ರಗಳನ್ನು ಮನವರಿಕೆಯಾಗುವಂತೆ ಅಭಿವೃದ್ಧಿಪಡಿಸುವಲ್ಲಿ ಸಫಲರಾಗಿದ್ದಾರೆ ಮತ್ತು ತಮ್ಮ ಹಳೆಯ ಸಿನಿಮಾದಲಿದ್ದ ಮೋಜು-ಮಾಸ್ತಿ ಹುಡುಕಟಿಕೆಯ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡೆನೆಯ ಪಾತ್ರ, ಕಟ್ಟುನಿಟ್ಟಾದ ರೆಬೆಲ್ ಪೊಲೀಸ್ ಇನ್ಸ್‌ಪೆಕ್ಟರ್ ಗಿರಿಜಾ, ಚಿತ್ರಮಂದಿರಗಳಲ್ಲಿ ಈ ಪಾತ್ರಕ್ಕೆ ತುಂಬಾ ಬೆಂಬಲ ಮತ್ತು ಪ್ರತಿಕ್ರಿಯೆ ದೊರೆಯುತ್ತಿದೆ ಜೊತೆಗೆ ಅವರು ತುಂಬಾ ಸ್ಪೂರ್ತಿದಾಯಕ ಪೊಲೀಸ್ ಆಗಿ ನಟಿಸಿದ್ದಾರೆ.. ಪ್ರಶಂಸಿಸಬೇಕೆಂಬ ಮೂರನೆಯ ಪತ್ರ ಕಳನಾಯಕನಾಗಿದ್ದರು ಡ್ರ್ಯಾಗನ್ ಮಂಜು ಪರದೆಯ ಮೇಲೆ ಬಂದಾಗಲೆಲ್ಲ ಆ ದೃಶ್ಯವನ್ನ ತಮ್ಮ ದೈತ ರೂಪದ ಮೂಲಕ ಅವರಿಸುತ್ತಿದರು. ಮೊದಲನೆಯ ಸಿನಿಮಾ ಆದರೂ ಕೂಡ ತಮ್ಮ ನಟನೆ ಕಾರ್ಯವನ್ನ ಸರಿಯಾಗಿ ನಿರ್ವಹಿಸಿದ್ದಾರೆ. ಮನಸಿಗೆ ತೃಪ್ತಿ ಯಾಗುವ ನಾಲ್ಕನೇ ಪಾತ್ರ ರಂಗಾಯಣ ರಘು ಈ ಸಿನಿಮಾದಲ್ಲಿ ಅತಿಥಿ ಪಾತ್ರವಾದರು ಎಂದಿನಂತೆ ಜನರಿಗೆ ಹತ್ತಿರವಾಗಿದ್ದಾರೆ. ಕೊನೆಯದಾಗಿ ಈ ಸಿನಿಮಾದಲ್ಲಿ ಒಂದು ವೈಯಕ್ತಿಕ ಸಹಾಯಕನಾ (PA) ಪಾತ್ರ ಇದೇ ಈ ಪಾತ್ರ ನಿಮಗೆ ಹೊಟ್ಟೆ ನೋವು ಬರುವಷ್ಟು ನಗಿಸುವುದು ಸತ್ಯ. ಹಾಗೆ ಗೋಪಾಲಕೃಷ್ಣ ಮತ್ತು ದುನಿಯಾ ವಿಜಯ್ ಇದ್ದ ದೃಶ್ಯಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ ಮತ್ತು ಇನಿತರ ಪಾತ್ರಗಳು ತಮ್ಮ-ತಮ್ಮ ಕರ್ತವ್ಯ ಮತ್ತು ತಮಗೆ ನಿರ್ವಹಿಸಿದ ಪತ್ರಗಳನ್ನು ಸರಿಯಾಗಿ ನಿರ್ವಹಿಸಿ ಪ್ರೇಕ್ಷಕರಿಗೆ ಮನೋರಂಜನೆ ನೀಡಿದ್ದಾರೆ. ಇನೊಂದು ಮುಕ್ಯವಾದ ಧನಾತ್ಮಕ ಅಂಶವೇನೆದಾದರೆ, ಇತ್ತೀಚ್ಚಿನ ಧಾರ್ಮಿಕ ಅಸಮಾನತೆ ಮತ್ತು ಸಮಾಜದ ಕೆಟ್ಟ ಬೆಳವಣಿಗೆಗಳ ನಡುವೆ ಹಿಂದೂ-ಮುಸ್ಲಿಂ ಭಾವೈಕ್ಯತೆ, ಹೆಣ್ಣುಮಕ್ಕಳ ಗೌರವದ ಬಗ್ಗೆ ತುಂಬ ಉತಮವಾಗಿ ತೋರಿಸಿದ್ದಾರೆ ಇವು ಅವಶ್ಯಕ ಅಂಶಗಳಾಗಿವೆ.

ಜೊತೆಗೆ ಈ ಸಿನಿಮಾವನ್ನ ಪ್ರತಿ ಕುಟುಂಬ ನೋಡಿ ಜಾಗೃತರಾಗಬೇಕು ಆದರೆ ಅಲ್ಲಿದ ಸ್ವಲ್ಪ  ಅಸಭ್ಯ ಭಾಷೆ ಮತ್ತು ಕೆಲವೊಂದು ದೃಶ್ಯ ನಿಮ್ಮನ್ನು ಮುಜುಗರಕ್ಕೆ ಉಂಟುಮಾಡಬಹುದು ಆದರೆ ವಿಷಯಗಳೆಲ್ಲ ನೆರವಾಗಿದೆ ಮತ್ತು ಸಮಾಜದ ಸತ್ಯಾಂಗಳಿಂದ ಕೂಡಿದೆ .

ಕುತೂಹಲಕಾರಿಯಾಗಿ ಸಾಗುತ್ತಿದ್ದ ಸಿನಿಮಾ ಕೆಲವೊಂದು ಪ್ರತಿಕ್ರಿಯೆ ಮತ್ತು ದೃಶ್ಯಗಳು ಪುನರಾವರ್ತನೆ ಆಗುವುದರಿಂದ ಮೊದಲನೆಯ ಭಾಗದಲ್ಲಿದ ಕುತೂಹಲ ಎರಡನೆಯ ಭಾಗದಲ್ಲಿ ಕಡಿಮೆ ಆಯ್ತು. ಇಲ್ಲಿ ತುಂಬಾನೇ ಪದರಗಳು ಸೇರಿದ್ದು ಮತ್ತು ವೈರತ್ವ ಕಡಿಮೆಯಾಗಿತ್ತು ಹಾಗೆ ಕಥೆ ತನ್ನ ಮೂಲ ಕಥೆಯ ಕಳೆದುಕೊಂಡಿದ್ದು ಒಂದು ಹಿನ್ನಡೆ. ಮುಂದೆ ಕ್ಲೈಮ್ಯಾಕ್ಸ್, ಇಲ್ಲಿದ ಸಂಗೀತ ಅದ್ಭುತವಾಗಿತ್ತು ಆದರೆ ಸಿನಿಮಾವನ್ನ ಮುಗಿಸಿದ ರೀತಿ ಸರಿಹೊಂದಲಿಲ್ಲ, ಯಾಕಂದ್ರೆ ಸಿನಿಮಾ ಮುಗಿದಮೇಲೆ ನಾವು ಎಲ್ಲರೂ ಸಿನಿಮಾದಲ್ಲಿದ ಒಳ್ಳೆಯ ಸಂದೇಶದ ಬಗ್ಗೆ ಚರ್ಚಿಸಬೇಕೆ ಹೊರತು ಸಿನಿಮಾದ ಕೊನೆಯಲ್ಲಿ ತೋರಿಸಿದ ಒಂದು ದೃಶ್ಯದ ಬಗ್ಗೆ ಚರ್ಸಿಸುವ ಹಾಗೆ ಮಾಡಿದ್ದು, ಸಿನಿಮಾದ ಮೂಲ ಕಥೆ ಮತ್ತು ಒಂದು ಒಳ್ಳೆ ಸಂದೇಶಕ್ಕೆ ಯಾವುದೇ ತೂಕವಿಲ್ಲ ಎಂಬ ಅರ್ಥ ತಂದುಕೊಡುತ್ತದೆ. ದುನಿಯಾ ವಿಜಯ್ ಅವರ ಉದ್ದೇಶ ವಿದ್ದಿದು ಡ್ರಗ್ಸ್ ಮತ್ತು ಕೆಟ್ಟ ಚಟಗಳ ಬಗ್ಗೆ ಜನರಿಗೆ ಜಾಗೃತಿ ಮುದಿಸಬೇಕೆಂಬ ಯೋಚನೆ. ಆದರೆ ಚಲನಚಿತ್ರದಿಂದ ಹೊರಬಂದ ಜನ ಇದೆಲ್ಲದರ ಬಗ್ಗೆ ಬಿಟ್ಟು ಆ ಒಂದು ಕ್ಲೈಮ್ಯಾಕ್ಸ್ ಪಾತ್ರದ ಬಗ್ಗೆ ಮಾತಾಡುವ ಹಾಗೆ ಮಾಡಿದ್ದು ಮತೊಮ್ಮೆ ಸಿನಿಮಾದ ಮೂಲ ನಡೆಯನ್ನ ಕಳೆದುಕೊಂಡಿದೆ. ಕೊನೆಯದಾಗಿ ದುನಿಯಾ ವಿಜಯ್ ಅವ್ರು ತಮ್ಮ ನಿರ್ದೇಶನದಲ್ಲಿ ಗೆದ್ದಿದ್ದರೆ ಆದರೆ ಬರವಣಿಗೆಯಲ್ಲಿ ಇನ್ನು ಸ್ವಲ್ಪ ಉತ್ತಮವಾಗಿ ನಿರೀಕ್ಷಿಸುತ್ತೇವೆ . 

ಕನ್ನಡ ಚಿತ್ರರಂಗ ಕಂಟೆಂಟ್ ಹೊಂದಿರುವಂತಹ ಸಿನಿಮಾ ನೀಡುವುದರಲ್ಲಿ ವಿಫಲವಾಗಿದೆ ಆದರೆ ಇತ್ತೀಚಿನ ಕಾಟೇರ ಮತ್ತು ಈ ಭೀಮ ಕಂಟೆಂಟ್ ನೀಡುವೆ ಇವು ಕನ್ನಡದ ಚಿತ್ರರಂಗಕ್ಕೆ ಹೊಸ ಆಯಾಮ ನೀಡುವಲ್ಲಿ ಯಶಸ್ವಿಯಾಗಿವೆ. ಮೊದಲೆಲ್ಲ ಮೂರು ಸಾಂಗ್ ಹಾಗೂ ಒಂದೆರಡು ಫೈಟ್ ಇದ್ರೆ ಸಾಕು ಅಂತ ನಿರ್ಮಾಪಕರು ಮತ್ತು ನಿರ್ದೇಶಕರು ಸಿನಿಮಾ ಮಾಡ್ತಾ ಇದ್ರು. ಆದರೆ ಈಗ ಬೇರೆ ಭಾಷೆಯ ಸಿನಿಮಾಗಳ ಬೆಳವಣಿಗೆಯಿಂದಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಕೂಡ ಕಂಟೆಂಟ್ ವಿಚಾರದಲ್ಲಿ ಕ್ರಾಂತಿಕಾರಿ ಬದಲಾವಣೆ ಬಂದಿದೆ ಅಂತ ಹೇಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರಿಗೆ ಸಿನಿಮಾ ಕೇವಲ ಮನೋರಂಜನೆ ಮಧ್ಯಮ ವಲ್ಲದೇ, ಇನ್ನೂ ಹೆಚ್ಚಾಗಿ ಜ್ಞಾನವುಳ್ಳ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುವ ಸಾಧನವಾಗಿ ನೋಡುತ್ತಿದ್ದಾರೆ. ಈ ರೀತಿಯ ಸಾಮಾಜಿಕ ಕಳಕಳಿಯ ಸಿನಿಮಾಗಳನ್ನ ಕನ್ನಡದಲ್ಲಿ ಇನ್ನೂ ಹೆಚ್ಚು ನಿರೀಕ್ಷಿಸುತ್ತೇವೆ.


ಥಿಯೇಟರ್ ಗೇ ಜನ ಬರ್ತಿಲ್ಲ, ಕನ್ನಡ ಸಿನಿಮಾನ ಜನ ನೋಡ್ತಿಲ್ಲ ಅಂತ ಹೇಳೋದಲ್ಲ ಅಂತ ಚಿತ್ರರಂಗ ಬಾಯಿ ಬಡಿದುಕೊಳ್ಳುತ್ತಿರುವಾಗ. ಒಳ್ಳೆಯ ಕಥೆ ಮತ್ತು ಸಂದೇಶವಿರುವ ಸಿನಿಮಾನ ಸರಿಯಾಗಿ ಮಾಡಿದರೆ, ಕನ್ನಡ ಪ್ರೇಕ್ಷಕರು ನುಗ್ಗಿ, ನೋಡಿ ಕಣ್ಣು ತುಂಬಿಕೊಂಡು ಹೌಸ್ ಫುಲ್ ಮಾಡ್ತಾರೆ ಅನ್ನೋದಕ್ಕೆ ಬಲವಾದ ಉದಾಹರಣೆ ನಮ್ಮ ಭೀಮ. ಈ ‘ಭೀಮ’ ಸಿನಿಮಾ ಬಹುದೊಡ್ಡ ಸಾಮಾಜಿಕ ವಿಷಯ ಮತ್ತು ಸಂದೇಶದಿಂದ ಕೂಡಿದೆ ಮತ್ತು ಮಾಸ್‌ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ  ಯಶಸ್ವಿಯಾಗಿದೆ.  ಸಿಂಗಲ್ ಸ್ಕ್ರೀನ್‌ಗಳಲ್ಲಿ ಭೀಮನ ಅಬ್ಬರ ಜೋರಾಗಿದೆ.

-ಮನೋಜ್

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.