ಮುಖ್ಯಾಂಶಗಳು

SC – ST ವಿದ್ಯಾರ್ಥಿ Prize Money ಗೆ ಅರ್ಜಿ ಸಲ್ಲಿಸುವ ವಿಧಾನ!

ಕರ್ನಾಟಕ ಸರ್ಕಾರವು ಪ್ರತಿ ವರ್ಷ ರಾಜ್ಯದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ (Prize Money) ನೀಡುವ ಯೋಜನೆ ರೂಪಿಸಿದೆ. ಪ್ರಥಮ ದರ್ಜೆ ಎಂದರೆ 60%/75% ಮೇಲೆ ಶೇಕಡಾವಾರು ಅಂಕ ತೆಗಡಿರುವ ವಿದ್ಯಾರ್ಥಿಗಳಿಗೆ ಮತ್ತು ಇದು PUC, SSLC, Polytechnic Diploma, UG, PG ಮತ್ತು Professional Courses ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಈ ಲೇಖನದಲ್ಲಿ, ಈ ಯೋಜನೆಗೆ ಅರ್ಜಿ ಹಾಕುವ ವಿಧಾನ ಮತ್ತು ಅರ್ಹತೆಗಳ ಕುರಿತು ವಿವರ ನೀಡಲಾಗಿದೆ.

ಅರ್ಹತೆ :

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • SC/ST ವರ್ಗದ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.
  • ಈ ವಿದ್ಯಾರ್ಥಿವೇತನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ.
  • ವಿದ್ಯಾರ್ಥಿಗಳು ಹಿಂದಿನ ವರ್ಷದ ಪರೀಕ್ಷೆಯಲ್ಲಿ ಪ್ರಥಮ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿಗಳು ಮೆಟ್ರಿಕ್ಯುಲೇಷನ್ ನಂತರ ಮುಂದುವರಿಯಬೇಕು.

ಅಗತ್ಯವಿರುವ ದಾಖಲಾತಿಗಳು :

  • ಆದಾಯ ಪ್ರಮಾಣಪತ್ರ.
  • ಜಾತಿ ಪ್ರಮಾಣ ಪತ್ರ.
  • ಪಿಯುಸಿ ಅಂಕಪಟ್ಟಿ.
  • SSLC ಅಂಕಪಟ್ಟಿ.
  • ಬ್ಯಾಂಕ್ ಪಾಸ್ ಬುಕ್ ವಿವರಗಳು.
  • ಅಂಗವೈಕಲ್ಯ ಪ್ರಮಾಣಪತ್ರ.
  • ಮಾನ್ಯವಾದ ಫೋನ್ ಸಂಖ್ಯೆ.

ಮೊತ್ತದ ವಿವರಗಳು :

SSLC₹15,000
II PUC ಮತ್ತು Polytechnic Diploma₹20,000
Undergraduate Degree(B.A, B.Sc, B.com)₹25,000
Postgraduate Degree(M.A., M.Sc.,etc.)₹30,000
Professional Courses(Agriculture, Engineering, Veterinary, Medicine)₹35,000
ಮೇಲಿನ ವಿವರಗಳನ್ನು ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :

ಕೆಳಗೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸತಕ್ಕದ್ದು.

ಸಹಾಯಕ್ಕಾಗಿ ಸಂಪರ್ಕ ವಿವರಗಳು :

24/7 ಸಹಾಯವಾಣಿ ಸಂಖ್ಯೆ : 08022634300

ಇಲಾಖೆ ಸಂಖ್ಯೆ : 08 0-22340956,9480843005

ಇಮೇಲ್ : helpwkar@gmail.com


ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.