ಮುಖ್ಯಾಂಶಗಳು

BMTCಯಲ್ಲಿ 2500 ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬೆಂಗಳೂರು ಮಹಾನಗರ ಸಾರಿಗೆ(BMTC) ಸಂಸ್ಥೆಯಲ್ಲಿ ಖಾಲಿ ಇರುವ ನಿರ್ವಾಹಕ (ಕಂಡಕ್ಟರ್) ಹುದ್ದೆಗೆ ಮಿಕ್ಕುಳಿದ ಮತ್ತು ಸ್ಥಳೀಯ ಈ ಎರಡು ವೃಂದಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

1) ಮಿಕ್ಕುಳಿದ ವೃಂದ ಹುದ್ದೆಗಳು:- 2286
2) ಸ್ಥಳೀಯ ವೃಂದ ಹುದ್ದೆಗಳು :- 214
ಒಟ್ಟು ಹುದ್ದೆಗಳು= 2500

ಅರ್ಜಿ ಸಲ್ಲಿಸಲು ಶೈಕ್ಷಣಿಕ ವಿದ್ಯಾಹರ್ತೆ:
ತತ್ಸಮಾನ ವಿದ್ಯಾಹರ್ತೆ ಅಂದರೆ ಪಿಯುಸಿ ಅಥವಾ 10+2 ICSE ಅಥವಾ CBSC ಯಲ್ಲಿ ಅಥವಾ ಮೂರು ವರ್ಷದ ಡಿಪ್ಲೋಮಾಯಲ್ಲಿ ಉತ್ತೀರ್ಣರಾಗಿರತಕ್ಕದ್ದು.

ದೇಹದಾರ್ಡ್ಯತೆ:
ಪುರುಷರ ಎತ್ತರ 160cm
ಮಹಿಳೆಯ ಎತ್ತರ 150cm.

ವಯೋಮಿತಿ:
ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 10/04/2024 ರಂದು ಕನಿಷ್ಠ ಕೆಳಗೆ ನೀಡಿರುವ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ ಮೀರಿರಬಾರದು.

  • ಸಾಮಾನ್ಯ ವರ್ಗದ ಕನಿಷ್ಠ ವಯೋಮಿತಿ 18 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 35 ವರ್ಷಗಳು.
  • 2A/2B/3A/3B ವರ್ಗದ ಕನಿಷ್ಠ ವಯೋಮಿತಿ 18 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 35 ವರ್ಷಗಳು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ವರ್ಗದ ಕನಿಷ್ಠ ವಯೋಮಿತಿ 18 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 40 ವರ್ಷಗಳು
  • ಮಾಜಿ ಸೈನಿಕ ಇಲಾಖೆ ಅಭ್ಯರ್ಥಿಗಳು 45 ವರ್ಷಗಳ ಗರಿಷ್ಠ ವಯೋಮಿತಿ ಮೀರದವರು ಅರ್ಹರು.

ಅರ್ಜಿ ಸಲ್ಲಿಸುವ ವಿಧಾನ:
10/03/2024 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡು 10/04/2024 ರಂದು ಮುಗಿಯುತ್ತದೆ.
ಮತ್ತು 13/04/2024 ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ.
ಈ ದಿನಾಂಕದೊಳಗೆ ಈ cetonline.karnataka.gov.in ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ ಮತ್ತು 2A/2B/3A/3B ವರ್ಗದ ಅಭ್ಯರ್ಥಿಗಳಿಗೆ 750.ರೂ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1, ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 500.ರೂ.

ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸತಕ್ಕದ್ದು. ನಿಗದಿತ ಶುಲ್ಕವನ್ನು ಸಂದಾಯ ಮಾಡದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಸಂಪೂರ್ಣ ಅಧಿಸೂಚನೆ ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ಇನ್ನು ಹೆಚ್ಚಿನ ಉದ್ಯೋಗದ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರೂಪ್ JOIN ಆಗಿ:

https://t.me/fastkannada

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.