ಮುಖ್ಯಾಂಶಗಳು

ಪರಿಶಿಷ್ಟ ಜಾತಿ ಮಹಿಳಾ ಪದವೀಧರರಿಗೆ ಉದ್ಯಮಶೀಲತಾ ತರಬೇತಿ

Listen to this article

ಮಹಿಳಾ ಸಬಲೀಕರಣಕ್ಕೆ ಸದಾ ಬೆಂಬಲ ನೀಡುವ ರಾಜ್ಯ ಸರ್ಕಾರವು, ಪರಿಶಿಷ್ಟ ಜಾತಿ ಮಹಿಳಾ ಪದವೀಧರರಿಗೆ ಉದ್ಯಮಶೀಲತಾ ತರಬೇತಿ ನೀಡಲು ಮುಂದಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 50 ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರಿಗೆ ಉದ್ಯಮಗಳನ್ನು ಸ್ಥಾಪಿಸಲು ಪೂರಕವಾಗುವಂತೆ ಪ್ರತಿಷ್ಠಿತ ಐ.ಐ.ಎಂ. ಬೆಂಗಳೂರು ಇವರ ಮೂಲಕ ಉದ್ಯಮಶೀಲತಾ ತರಬೇತಿಗಾಗಿ ಅರ್ಜಿಗಳನ್ನು ಇಲಾಖೆಯ ಅಧಿಕೃತ ಜಾಲತಾಣ www.sw.kar.nic.in ನಲ್ಲಿ ಆಹ್ವಾನಿಸಲಾಗಿದೆ.

ಈ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು

  • ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದ್ದು, ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • ಉದ್ಯಮಗಳನ್ನು ಸ್ಥಾಪಿಸುವ ಉದ್ದೇಶವಿರುವವರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
  • ವಯೋಮಿತಿ ಕನಿಷ್ಠ – 21 ವರ್ಷಗಳು ಗರಿಷ್ಠ 45 ವರ್ಷಗಳು.
  • ತರಬೇತಿಯ ಅವಧಿ – 5 ರಿಂದ 6 ತಿಂಗಳು.
  • 8 ದಿನದ ತರಬೇತಿಯು ಐ.ಐ.ಎಂ-ಬೆಂಗಳೂರು ಸಂಸ್ಥೆ ಕ್ಯಾಂಪಸ್‌ನಲ್ಲಿ ಹಾಗೂ MOOC ಮುಖಾಂತರ ನೀಡಲಾಗುವುದು.
  • ಐ.ಐ.ಎಂ – ಬೆಂಗಳೂರು ರವರು ನಡೆಸುವ ಸ್ತ್ರೀನಿಂಗ್ ಟೆಸ್ಟ್ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
  • ಶೇ. 100 ರಷ್ಟು ಹಾಜರಾತಿ ಕಡ್ಡಾಯ.
  • ಸ್ಟ್ರೀನಿಂಗ್ ಟೆಸ್ಟ್ ದಿನಾಂಕ 11.02.2024 ರಂದು ಐ.ಐ.ಎಂ-ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಸಲಾಗುವುದು.

ತರಬೇತಿ ಪಡೆಯಲು ಇಚ್ಚಿಸುವವರು ಆನ್‌ಲೈನ್ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ: 17.01.2024 ರಿಂದ ದಿನಾಂಕ: 31.01.2024 ರ ಸಂಜೆ 5 ಗಂಟೆಯ ವರಗೆ ಸಲ್ಲಿಸತಕ್ಕದ್ದು.

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.