Table of Contents
Sc/st free coaching online application : ಸಮಾಜ ಕಲ್ಯಾಣ ಇಲಾಖೆಯು 2024-25ನೇ ಸಾಲಿಗೆ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕೆಎಎಸ್/ಗ್ರೂಪ್-ಸಿ/ಬ್ಯಾಂಕಿಂಗ್/ಎಸ್ಎಸ್ಸಿ/ಆರ್ಆರ್ಬಿ/ನ್ಯಾಯಾಂಗ ಸೇವೆಗಳ ಪೂರ್ವಸಿದ್ಧತಾ ತರಬೇತಿಗೆ ಆಯ್ಕೆಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ಕೆಎಎಸ್/ಗ್ರೂಪ್-ಸಿ/ಬ್ಯಾಂಕಿಂಗ್/ಎಸ್ಎಸ್ಸಿ/ಆರ್ಆರ್ಬಿ/ನ್ಯಾಯಾಂಗ ಸೇವೆಗಳ ಪೂರ್ವಸಿದ್ಧತಾ ತರಬೇತಿಗಾಗಿ, ಎಸ್ಸಿ/ಎಸ್ಟಿ ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ನಿಗದಿತ ಗುರಿಗಳ ಪ್ರಕಾರ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಅಭ್ಯರ್ಥಿಗಳಿಗೆ ಸರ್ಕಾರವು ನಿಗದಿಪಡಿಸಿದ ದರದಲ್ಲಿ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಸ್ಟೈಫಂಡ್ ಅನ್ನು ವರ್ಗಾಯಿಸಲಾಗುತ್ತದೆ ಮತ್ತು ತರಬೇತಿ ವೆಚ್ಚವನ್ನು ತರಬೇತಿ ಸಂಸ್ಥೆಗಳಿಗೆ ಪಾವತಿಸಲಾಗುತ್ತದೆ. ಸೇವೆ ಪೂರ್ವಭಾವಿ ತರಬೇತಿ ಅವಧಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಸಲ್ಲಿಸಬೇಕಾದ ವೆಬ್ಸೈಟ್ ವಿಳಾಸ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರಗಳು ಈ ಕೆಳಕಂಡಂತಿದೆ.

ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಇತರ ಮಾಹಿತಿ : Sc/st free coaching online application.
ಅಭ್ಯರ್ಥಿಗಳ ಆಯ್ಕೆ | SC- 400, ST- 200 |
ಕೋರ್ಸಿನ ತರಬೇತಿ ಮತ್ತು ಅವಧಿಯ ವಿವರ | KAS – 7 Months ಗ್ರೂಪ್ಸಿ / ಬ್ಯಾಂಕಿಂಗ್ / RRB / SSC / ನ್ಯಾಯಾಂಗ (Judiciary) – 03 Months |
ಕೋರ್ಸಿನ ವಿವರ | ಸದರಿ ತರಬೇತಿಗೆ ಪದವಿಯಲ್ಲಿ ಉತ್ತೀರ್ಣರಾಗಿರುವ ಮತ್ತು ಅಂತಿಮ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿದ್ದು, ಆಯ್ಕೆ ಪ್ರಕ್ರಿಯೆ ಹಂತದಲ್ಲಿ ಪದವಿ ವ್ಯಾಸಂಗ ಪೂರ್ಣ ಮುಕ್ತಾಯಗೊಳಿಸಿರುವ ಬಗ್ಗೆ ಅಧಿಕೃತ ದಾಖಲೆಗಳನ್ನು ಹೊಂದಿರಬೇಕು. |
ವಯಸ್ಸು | 21 ರಿಂದ್ 37 ವರ್ಷ |
ವಾರ್ಷಿಕ ಆದಾಯ | 5 ಲಕ್ಷ ಮೀರಿರಬಾರದು |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 20/02/2025 |
ಆಯ್ಕೆ ವಿಧಾನ | 1. ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅಂಕಗಳ ಆಧಾರದ ಮಾಡಲಾಗುತ್ತದೆ. 2. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಕೌನ್ಸಿಲಿಂಗ್ ಮೂಲಕ ಅಭ್ಯರ್ಥಿಗಳನ್ನು ನಿಯೋಜಿಸಲಾಗುತ್ತದೆ. |
UPSC ತರಬೇತಿಗೆ ಶಿಷ್ಯವೇತನ (ಮಾಸಿಕ) | – ಕೆ.ಎ.ಎಸ್-ರೂ. 5000/- (07 ತಿಂಗಳುಗಳು). – ಜಿ.ಪಿ.ಸಿ/ಬ್ಯಾಂಕಿಂಗ್/ಎಸ್ಎಸ್ಸಿ/ಆರ್ಆರ್ಬಿ/ನ್ಯಾಯಾಂಗ ಸೇವೆಗಳು-ರೂ. 5000/- (03 ತಿಂಗಳುಗಳು). |
ತರಬೇತಿ ಸಂಸ್ಥೆಯು ಪ್ರತಿ ತಿಂಗಳು ಸಲ್ಲಿಸುವ ಹಾಜರಾತಿಯ ಪ್ರಕಾರ ಬಯೋಮೆಟ್ರಿಕ್ ಶಿಷ್ಯವೇತನ ಪಾವತಿಸಲಾಗುತ್ತದೆ. ಆದಾಗ್ಯೂ, ತರಬೇತಿ ಅವಧಿಯಲ್ಲಿ ಇಲಾಖೆಯಿಂದ ಯಾವುದೇ ವಸತಿ ಸೌಲಭ್ಯವನ್ನು ಒದಗಿಸಲಾಗುವುದಿಲ್ಲ.
ಅಪ್ಲಿಕೇಶನ್ ವಿಧಾನ, ಆನ್ಲೈನ್ ಅಪ್ಲಿಕೇಶನ್ , ಕೊನೆಯ ಅರ್ಜಿ ದಿನಾಂಕ ಮತ್ತು ಶೈಕ್ಷಣಿಕ ಅವಶ್ಯಕತೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತ ಸೈಟ್ನಲ್ಲಿ ಕಾಣಬಹುದು. ಇಲಾಖೆಯ ವೆಬ್ಸೈಟ್ನಲ್ಲಿ ಕಾಲಕಾಲಕ್ಕೆ ಒದಗಿಸಲಾದ ಮಾಹಿತಿಯು ಅಧಿಕೃತ ಮತ್ತು ಅಂತಿಮವಾಗಿರುತ್ತದೆ. ಅರ್ಜಿ ಸಲ್ಲಿಸುವ ಮೊದಲು ಕೆಳಗೆ ನೀಡಲಾದ ಅಧಿಸೂಚನೆಯನ್ನು ಓದಿ ಆನಂತರ, ಆಸಕ್ತ ಅಭ್ಯರ್ಥಿಗಳು ಅವರು ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ನಿಗದಿತ ಗಡುವಿನೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.
ಅಧಿಸೂಚನೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ (ಇಲ್ಲಿ ಕ್ಲಿಕ್ ಮಾಡಿ)
ಅರ್ಜಿ ಸಲ್ಲಿಸಲು (ಇಲ್ಲಿ ಕ್ಲಿಕ್ ಮಾಡಿ)
ನಮ್ಮ Fast Kannada ಟ್ರೆಂಡಿಂಗ್ ಸುದ್ದಿಗಳು
- What to do after 2nd PUC ?: ದ್ವಿತೀಯ ಪಿಯುಸಿ ನಂತರ ಏನು ಮಾಡಬೇಕು?
- 2nd PUC Result 2025 Karnataka: ದ್ವಿತೀಯ ಪಿಯುಸಿ ಫಲಿತಾಂಶ ಇಲ್ಲಿ ನೋಡಿ! – Direct Link
- Indian Navy New Recruitment 2025: ಭಾರತೀಯ ನೌಕಾಪಡೆಯಲ್ಲಿ ಆಗ್ನಿವೀರ್ ನೇಮಕಾತಿ ಅರ್ಜಿ ಆಹ್ವಾನ!
- How to apply prize money scholarship: ಸಮಾಜ ಕಲ್ಯಾಣ ಇಲಾಖೆ Prize Money 2024 Apply Online: SC – ST ವಿದ್ಯಾರ್ಥಿ Prize Money ಗೆ ಅರ್ಜಿ ಸಲ್ಲಿಸುವ ವಿಧಾನ!
- How to Protect Your Skin from the Sun: ಬೇಸಿಗೆ ಬಿಸಿಲಿನಿಂದ ನಿಮ್ಮ ಮುಖವನ್ನು ರಕ್ಷಿಸುವುದು ಹೇಗೆ?
- Adarsha Vidyalaya Application 2025: ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
- India Post Requirement 2025: ಭಾರತೀಯ ಅಂಚೆಯಲ್ಲಿ 21,413 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- KSOU Application 2025 – ನೀವು ಮನೆಯಲ್ಲಿಯೇ ನಿಮ್ಮ ಪದವಿಯನ್ನು ಪೂರ್ಣಗೊಳಿಸಬಹುದು.
- Will AI Take Over Jobs? A Detailed Analysis: AI ನಿಮ್ಮ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತದೆಯೇ? ವಿವರವಾದ ವಿಶೇಷ ವಿಶ್ಲೇಷಣೆ
- Don’t Miss : (2024-25) SC/ST ವಿದ್ಯಾರ್ಥಿಗಳಿಗೆ ಉಚಿತ ತರಬೇತಿ – KAS, ಬ್ಯಾಂಕಿಂಗ್, IBPS, SSC, ನ್ಯಾಯಾಂಗ ಸೇವೆಗಳು ಮತ್ತು Group-c
- ಏನಿದು Deep Seek -ಏಕೆ ಎಲ್ಲರೂ ಇದರ ಬಗ್ಗೆ ಮಾತನಾಡುತ್ತಿದ್ದಾರೆ?
- UPSC Notification 2025: ಕೇಂದ್ರ ಲೋಕಸೇವಾ ಆಯೋಗವು 979 Civil Services (IAS, IPS, IRS,…..) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.!!