ಮುಖ್ಯಾಂಶಗಳು

Thangalaan Kannada Review : ‘ತಂಗಲಾನ್’ ಮೂಲನಿವಾಸಿಗಳ ಅಪರೂಪದ ಅತ್ಯಂತ ವಿರಳ ಚಿತ್ರಕಥೆ ಈಗ  ಕನ್ನಡದಲ್ಲಿ ನೋಡಿ!

Thangalaan Kannada Review

Netflix ನಲ್ಲಿದೆ ಎಂದ ತಕ್ಷಣ ನೋಡೋಣ ಇದರ ಬಗ್ಗೆ ಚರ್ಚೆ ಆಗಿದ್ವಲ್ಲ ಅಂತ ಕನ್ನಡದಲ್ಲಿ ನೋಡಲು ಶುರು ಮಾಡಿದೆ. ನಿಜಕ್ಕೂ, ಇದು ಅಪರೂಪದ ಚಿತ್ರ. ಬಹುಷಃ ಅತ್ಯಂತ ವಿರಳ ಚಿತ್ರಕಥೆ. 

ಮೂಲನಿವಾಸಿಗಳ ಕಥೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡಿರೋದು ಗೊತ್ತಾಗುತ್ತೆ. ತಂಗಲಾನ್ ಪಾತ್ರದಲ್ಲಿ ವಿಕ್ರಂ ಹಾಗೂ ಆತನ ಹೆಂಡತಿಯಾಗಿ ಮಿಲನ ಪಾರ್ವತಿ ಜೀವಿಸಿದ್ದಾರೆ. ಇಂತಹ ಪಾತ್ರಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಇಬ್ಬರೂ national award ಗೆ ಅರ್ಹರು. 

ತೊಡಲು ಕುಪ್ಪಸ ಸಿಕ್ಕಾಗ ಪಾರ್ವತಿ ಕುಣಿದ ಕುಪ್ಪಳಿಸೊ ರೀತಿ ಮನಮುಟ್ಟುತ್ತೆ. ಜಮೀನ್ದಾರಿ ಶೋಷಣೆ, ಜಾತೀಯತೆಯನ್ನು ಈ ಸಿನೆಮಾದಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ರಾಮಾನುಜಚಾರ್ಯರಿಂದ ಜನಿವಾರ ದೀಕ್ಷೆ ತಗೆದುಕೊಂಡ ದಲಿತರ ಪ್ರತಿನಿಧಿಯಾಗಿ ಒಂದು ಪಾತ್ರವಿದೆ ಅದು ಇನ್ನೊಂದು ಕಥೆಯನ್ನು ಹೇಳುತ್ತೆ. 

ಚಿತ್ರದ ಮೂಲಕ, ಅಲ್ಲಿನ ಪಾತ್ರಗಳ ಮೂಲಕ ನಿರ್ದೇಶಕ ಸೂಕ್ಷ್ಮ ವಿಷಯಗಳನ್ನು ಜನಕ್ಕೆ ಮುಟ್ಟಿಸಲು ಪ್ರಯತ್ನ ಪಟ್ಟಿದ್ದಾರೆ. ಮೂಲನಿವಾಸಿಗಳ ಸಂತನಾಗಿ ಬುದ್ಧನ ರೀತಿ ಇರೊ ವಿಗ್ರಹ ತೋರಿಸಲಾಗಿದೆ. ಬಹುಷಃ ಮೂಲ ನಿವಾಸಿಗಳ ಇತಿಹಾಸ ಬುದ್ಧನಿಗಿಂತ ಹಳೆಯದು. ಬುದ್ಧನ ಒಂದು ರೂಪಕವಾಗಿ ತೋರಿಸಿರಬಹುದು. 

ಆರತಿ, ಆರನ್ ಎಂಬ ಕಾಲ್ಪನಿಕ ಪಾತ್ರಗಳ ಮೂಲಕ ಈ ಮಣ್ಣಿನ ಕಥೆಯನ್ನು, ಅದರ ಮೇಲಿನ ಮಣ್ಣಿನ ಮಕ್ಕಳ ಹಕ್ಕಿನ ಕಥೆಯನ್ನು ನಿರ್ದೇಶಕ ಜಾಣ್ಮೆಯಿಂದ ಚಿತ್ರೀಕರಿಸಿದ್ದಾರೆ. ಛಾಯಾಗ್ರಹಣ,ಲೊಕೇಶನ್,ಮೇಕಪ್, ಕಾಸ್ಟ್ಯೂಮ್

ಮಸ್ತ್. ಪುಷ್ಪ, ಕೆಜಿಎಫ್ ನಂತೆ ಇದು ಮನೋರಂಜನೆ ಚಿತ್ರವಲ್ಲವಾದರೂ ಅಲ್ಲಲ್ಲಿ ನವಿರಾದ ಹಾಸ್ಯವಿದೆ. ಗಂಭೀರವಾದ ಕಥಾವಸ್ತು ಇಷ್ಟಪಡೋರು ಒಮ್ಮೆ ನೋಡಿ.

ಅಮರ್ ಪಾಟೀಲ್


ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.