ಕರ್ನಾಟಕ ಸರ್ಕಾರವು ಪ್ರತಿ ವರ್ಷ ರಾಜ್ಯದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ (Prize Money) ನೀಡುವ ಯೋಜನೆ ರೂಪಿಸಿದೆ. ಪ್ರಥಮ ದರ್ಜೆ ಎಂದರೆ 60%/75% ಮೇಲೆ ಶೇಕಡಾವಾರು ಅಂಕ ತೆಗಡಿರುವ ವಿದ್ಯಾರ್ಥಿಗಳಿಗೆ ಮತ್ತು ಇದು PUC, SSLC, Polytechnic Diploma, UG, PG ಮತ್ತು Professional Courses ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಈ ಲೇಖನದಲ್ಲಿ, ಈ ಯೋಜನೆಗೆ ಅರ್ಜಿ ಹಾಕುವ ವಿಧಾನ ಮತ್ತು ಅರ್ಹತೆಗಳ ಕುರಿತು ವಿವರ ನೀಡಲಾಗಿದೆ.
ಅರ್ಹತೆ :
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- SC/ST ವರ್ಗದ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.
- ಈ ವಿದ್ಯಾರ್ಥಿವೇತನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ.
- ವಿದ್ಯಾರ್ಥಿಗಳು ಹಿಂದಿನ ವರ್ಷದ ಪರೀಕ್ಷೆಯಲ್ಲಿ ಪ್ರಥಮ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿಗಳು ಮೆಟ್ರಿಕ್ಯುಲೇಷನ್ ನಂತರ ಮುಂದುವರಿಯಬೇಕು.
ಅಗತ್ಯವಿರುವ ದಾಖಲಾತಿಗಳು :
- ಆದಾಯ ಪ್ರಮಾಣಪತ್ರ.
- ಜಾತಿ ಪ್ರಮಾಣ ಪತ್ರ.
- ಪಿಯುಸಿ ಅಂಕಪಟ್ಟಿ.
- SSLC ಅಂಕಪಟ್ಟಿ.
- ಬ್ಯಾಂಕ್ ಪಾಸ್ ಬುಕ್ ವಿವರಗಳು.
- ಅಂಗವೈಕಲ್ಯ ಪ್ರಮಾಣಪತ್ರ.
- ಮಾನ್ಯವಾದ ಫೋನ್ ಸಂಖ್ಯೆ.
ಮೊತ್ತದ ವಿವರಗಳು :
SSLC | ₹15,000 |
II PUC ಮತ್ತು Polytechnic Diploma | ₹20,000 |
Undergraduate Degree(B.A, B.Sc, B.com) | ₹25,000 |
Postgraduate Degree(M.A., M.Sc.,etc.) | ₹30,000 |
Professional Courses(Agriculture, Engineering, Veterinary, Medicine) | ₹35,000 |
ಅರ್ಜಿ ಸಲ್ಲಿಸುವ ವಿಧಾನ :
ಕೆಳಗೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸತಕ್ಕದ್ದು.
ಸಹಾಯಕ್ಕಾಗಿ ಸಂಪರ್ಕ ವಿವರಗಳು :
24/7 ಸಹಾಯವಾಣಿ ಸಂಖ್ಯೆ : 08022634300
ಇಲಾಖೆ ಸಂಖ್ಯೆ : 08 0-22340956,9480843005
ಇಮೇಲ್ : helpwkar@gmail.com
- PC Free Coaching: ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ PC ತರಬೇತಿ
- The 2024 Global Hunger Index: ಭಾರತದಲ್ಲಿ ಹೆಚ್ಚುತ್ತಿರುವ ಹಸಿವಿನ ಮಟ್ಟ
- SBI Junior Associate Recruitment 2024: ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 13,735 ಹುದ್ದೆಗಳ ನೇಮಕಾತಿ
- Thangalaan Kannada Review : ‘ತಂಗಲಾನ್’ ಮೂಲನಿವಾಸಿಗಳ ಅಪರೂಪದ ಅತ್ಯಂತ ವಿರಳ ಚಿತ್ರಕಥೆ ಈಗ ಕನ್ನಡದಲ್ಲಿ ನೋಡಿ!
- Constitution Day 2024: ಸಂವಿಧಾನ ಯಾಕೆ ಮುಖ್ಯ? ಅದರ ಮಹತ್ವ ಮತ್ತು ಅಂಬೇಡ್ಕರ್.!!