ನಿಮ್ಮ ವಾಹನದ ನಿಯಮ ಉಲ್ಲಂಘನೆ ಭಾರೀ ದಂಡಕ್ಕೆ ಕಾರಣವಾಗಬಹುದು. ಪ್ರತಿ ನಿಯಮ ಉಲ್ಲಂಘನೆಗೆ ಹೇರಲಾಗುವ ದಂಡವನ್ನು ತಿಳಿದುಕೊಳ್ಳಿ, ನಿಮ್ಮ ಸುರಕ್ಷತೆಯ ಜೊತೆ ನಿಮ್ಮ ಹಣವನ್ನೂ ಕಾಪಾಡಿ! ನಿಯಮ ಪಾಲಿಸಿ, ದಂಡದಿಂದ ದೂರಿರಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಬಗ್ಗೆ ಸ್ಥಳ ದಂಡದ ವಿವರಗಳು ಇಲ್ಲಿವೆ.
ನಿಯಮ ಉಲ್ಲಂಘನೆ | ದಂಡ ಅಥವಾ ಶಿಕ್ಷೆ |
---|---|
ತ್ರಿಬಲ್ ರೈಡಿಂಗ್ | 1000 |
ವೀಲಿಂಗ್ | FIR |
ರಸ್ತೆ ವಿರುದ್ಧ ದಿಕ್ಕಿನಲ್ಲಿ ಚಾಲನೆ | FIR |
ಅಜಾಗರೂಕತೆ ಇಂದ ಚಾಲನೆ | 1000 |
ಅತೀ ವೇಗದ ಚಾಲನೆ | 1000 |
ರಸ್ತೆ ಮಧ್ಯದಲ್ಲಿ ವಾಹನ ನಿಲ್ಲಿಸಿದರೆ | 1000 |
ಸಮವಸ್ತ್ರ – ಧರಿಸದೇ ವಾಹನ ಚಾಲನೆ | 500 |
ಮದ್ಯಸೇವಿಸಿ ವಾಹನ ಚಲಾವಣೆ | ಕೋರ್ಟ್ ಫೈನ್ |
ಕಣ್ಣು ಕುಕ್ಕುವ ಹೆಡ್ ಲೈಟ್ | 500 |
ಪೊಲೀಸ್ ನೋಟಿಸಗೆ ಸಹಿ ಹಕಡಿರುವುದು | 2000 |
ಪೊಲೀಸರೊಂದಿಗೆ ಅಸಬ್ಯ ವರ್ತನೆ | 2000 |
ಡಿ.ಎಲ್ ಇಲ್ಲದೆ ವಾಹನ ಚಾಲನೆ | 1000 ಅಥವಾ 2000 ಅಥವಾ 5000 |
ಡಿ.ಎಲ್ ಇಲ್ಲದೆ ವಾಹನ ಚಾಲನೆಗೆ ನೀಡಿದರೆ | 1000 ಅಥವಾ 2000 ಅಥವಾ 5000 |
ನಂಬರ್ ಪ್ಲೇಟ್ ಇಲ್ಲದೆ ಅಥವಾ ತ್ತಪ್ಪದ ನಂಬರ್ ನಿಂದ ಚಾಲನೆ | 500 |
ಪೊಲೀಸ್ ಆದೇಶ ಉಲ್ಲಂಘನೆ | 500 |
ವಿಮೆ ಇಲ್ಲದೆ ವಾಹನ ಚಾಲನೆ | 1000 ಅಥವಾ 2000 ಅಥವಾ 5000 |
ನಿಗದಿತ ಭಾರಕ್ಕಿಂತ ಅಧಿಕ ಭಾರ ಸಾಗಿಸಿದ್ದು | ಕೋರ್ಟ್ ಫೈನ್ |
ವಾಹನ ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆ | 1500 ಅಥವಾ 3000 |
ಸೀಟು ಬೆಲ್ಟ್ ಹಾಕದೆ ವಾಹನ ಚಾಲನೆ | 500 |
ತಾತ್ಕಾಲಿಕ ನೋಂದಣಿ ಮಾಡದೇ ವಾಹನ ಚಾಲನೆ | ಕೋರ್ಟ್ ಫೈನ್ |
ಹೊದಿಕೆ ಹಾಕದೇ ಮರಳು ಅಥವಾ ಎಂ ಸಂಡ್ ಸಾಗಿಸುವುದು | ಆರ್.ಟಿ.ಒ ಫೈನ್ |
ದೋಷಪೂರಿತ ಸೈಲೆನ್ಸರ್ | 500 |
ಸವಾರ ಹೆಲ್ಮೆಟ್ ಧರಿಸದೆ ಇರುವುದು | 500 |
ನೋಂದಣಿ ಮಾಡದೇ ವಾಹನವನ್ನು ಚಲಿಸುವುದು | 500 |
ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಣನೆ ಮಾಡಲು ನೀಡಿದರೆ | ಕೋರ್ಟ್ ಫೈನ್ (25,000/- ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ಮತ್ತು ವಾಹನ ನೋಂದಣಿ ಸಂಖ್ಯೆ ರದ್ದು) |
ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ವಾಹನಗಳಿಗೆ ಸಂಬಂಧಪಟ್ಟ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ದಂಡ ಬೀಳುತ್ತಿದೆ.
ಸಾಕಷ್ಟು ನಗರದ ರಸ್ತೆಗಳು ಕ್ಯಾಮೆರಾದ ಕಣ್ಗಾವಲಿನಲ್ಲಿ ಇವೆ. ಅವುಗಳ ಮೂಲಕ ನೀವು ನಿಯಮ ಮೀರಿದಾಗ ನಿಮ್ಮ ಫೋಟೋ ಮೂಲಕ ನಿಮ್ಮ ಬಿದ್ದ ದಂಡದ ವಿವರ ಸಿಗಲಿದೆ.
.