ಮುಖ್ಯಾಂಶಗಳು

PSI Free Coaching: ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ PSI ತರಬೇತಿ!

2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಸಬ್ ಇನ್ಸೆಕ್ಟರ್ (PSI)/ಪ್ಯಾರ ಮಿಲಿಟರಿ ಪೂರ್ವ-ನೇಮಕಾತಿ ತರಬೇತಿ ಮತ್ತು 75 ದಿನಗಳ ವಸತಿ ಸಹಿತ ಉಚಿತ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ. ಈ ಉಚಿತ ವಸತಿ ಸಹಿತ ತರಬೇತಿಯ ಎಲ್ಲಾ ವಿವರಗಳು ಕೆಳಕಂಡಂತಿವೆ.

ಸಬ್ ಇನ್ಸೆಕ್ಟರ್ (PSI)/ಪ್ಯಾರ ಮಿಲಿಟರಿ ಪೂರ್ವ- ನೇಮಕಾತಿ ತರಬೇತಿಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಸತಿಯುತ, ಸಬ್ ಇನ್ಸೆಕ್ಟರ್ (PSI)/ಪ್ಯಾರ ಮಿಲಿಟರಿ ಪೂರ್ವ-ನೇಮಕಾತಿ ತರಬೇತಿ ನೀಡುವ ಸಂಬಂಧ ಕರ್ನಾಟಕ ರಾಜ್ಯದ 04 ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ 75 ದಿನಗಳ ವಸತಿಯುತ ತರಬೇತಿ ನೀಡಲಾಗುವುದು.
ವಯಸ್ಸುಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ ಸೇವಾನಿರತವಾಗಿರುವ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ.
ವಿದ್ಯಾರ್ಹತೆಯು.ಜಿ.ಸಿ ಇಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ (Degree) ಅಥವಾ ತತ್ಸಮಾನ (ಪಿಯುಸಿ ನಂತರ ಪದವಿಗೆ ಸಮನಾದ ಯಾವುದೇ ವಿದ್ಯಾರ್ಹತೆ) ಶಿಕ್ಷಣ ಪಾಸ್ ಮಾಡಿರಬೇಕು.
ಸೇವಾನಿರತ ಅಭ್ಯರ್ಥಿಗಳಿಗೆ ಅನುಭವಪೊಲೀಸ್ ಇಲಾಖೆಯ ಯಾವುದೇ ವೃಂದದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು.
ಅಭ್ಯರ್ಥಿಯ ಸಾಮಾನ್ಯ ಅರ್ಹತೆ1..ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.

2. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.

3. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಎತ್ತರಪುರುಷರಿಗೆ ಕನಿಷ್ಠ 163 cm.
ಮಹಿಳೆಯರಿಗೆ ಕನಿಷ್ಠ 153 cm.
ತೂಕಪುರುಷರಿಗೆ ಕನಿಷ್ಠ 50 kg.
ಮಹಿಳೆಯರಿಗೆ ಕನಿಷ್ಠ 45 kg.
ಎದೆ (ಪುರುಷರಿಗೆ ಮಾತ್ರ ಅನ್ವಯ)ಕನಿಷ್ಠ 76 cm.
ಆಯ್ಕೆ ವಿಧಾನಪದವಿಯಲ್ಲಿ ಪಡೆದಿರುವ ಅಂಕಗಳ ಆಧಾರದ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30-11-2024

ಅಧಿಸೂಚನೆಯನ್ನು ಡೌನ್ಫೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ :

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.