2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ನೀಡುವ NEET ಹಾಗೂ JEE (MAINS & ADVANCED) ಪರೀಕ್ಷಾ ಪೂರ್ವ ತರಬೇತಿಗಳಿಗಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಈ ತರಬೇತಿಯ ಮಾಹಿತಿಗಳನ್ನು ಕೆಳಗೆ ಹಂತ-ಹಂತವಾಗಿ ವಿವರಿಸಲಾಗಿದೆ.
ಸೂಚನೆ : ಕೆಳಗೆ ನೀಡಿರುವ ಅಧಿಸೂಚನೆಯನ್ನು ಸರಿಯಾಗಿ ಓದಿ ಈ ತರಬೇತಿಗೆ ಅರ್ಜಿ ಸಲ್ಲಿಸತಕ್ಕದ್ದು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಅರ್ಹತೆ ಮತ್ತು ಸೂಚನೆಗಳು :
- ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಅಥವಾ 3(ಬಿ) ಗೆ ಸೇರಿರಬೇಕು.
- ತರಬೇತಿಯನ್ನು ಬೆಂಗಳೂರು ನಗರ, ಮೈಸೂರು, ಧಾರವಾಡ ಮತ್ತು ಕಲಬುರಗಿ ನಗರಗಳಲ್ಲಿ ಮಾತ್ರ ನೀಡುತ್ತಿದ್ದು, ಆಯಾ ಜಿಲ್ಲೆಯಲ್ಲಿ ಪ್ರಥಮ ಪಿ.ಯು.ಸಿ/10+1 ಅನ್ನು ಪ್ರಸಕ್ತ (ವಿಜ್ಞಾನ ವಿಭಾಗದಲ್ಲಿ) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ಕಡ್ಡಾಯವಾಗಿ ವಿದ್ಯಾರ್ಥಿಯ ಹೆಸರಿನಲ್ಲಿರಬೇಕು, ಇಲ್ಲದಿದ್ದಲ್ಲಿ ಅಂತಹ ವಿದ್ಯಾರ್ಥಿಯನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
- ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ ಗರಿಷ್ಠ ರೂ.6.00 ಲಕ್ಷಗಳು.
- ವಿದ್ಯಾರ್ಹತೆ :- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸದರಿ ಪರೀಕ್ಷಾ ಪೂರ್ವ ತರಬೇತಿಗಳನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ/10ನೇ ತರಗತಿ ಪೂರ್ಣಗೊಳಿಸಿರಬೇಕು. ಎಸ್.ಎಸ್.ಎಲ್.ಸಿ/10ನೇ ತರಗತಿಯಲ್ಲಿ ಗಳಿಸಿರುವ ಶೇಕಡವಾರು ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು.
- ಅರ್ಹ ಆಸಕ್ತ ವಿದ್ಯಾರ್ಥಿಗಳು Online ಮೂಲಕವೇ ಅರ್ಜಿಗಳನ್ನು ಸಲ್ಲಿಸುವುದು. ಬೇರೆ ಯಾವ ಪ್ರಕಾರಗಳಲ್ಲೂ ಸಲ್ಲಿಸುವ ವಿದ್ಯಾರ್ಥಿಗಳ ಅರ್ಜಿಯನ್ನಾಗಲಿ ಅಥವಾ ಮನವಿಯನ್ನಾಗಲಿ ಪರಿಗಣಿಸಲಾಗುವುದಿಲ್ಲ.
- ತರಬೇತಿಯ ಪಠ್ಯಕ್ರಮ ತರಬೇತಿ ಅವಧಿ :- ಪ್ರಥಮ ವರ್ಷದಲ್ಲಿ ತರಬೇತಿಗೆ ಆಯ್ಕೆಯಾಗುವ ವಿದ್ಯಾರ್ಥಿಗೆ ಪ್ರಥಮ ಪಿ.ಯು.ಸಿ/10+1 ಗೆ ಹಾಗೂ ನಂತರದಲ್ಲಿ ದ್ವಿತೀಯ ಪಿ.ಯು.ಸಿ/10+2 ಗೆ ಸಂಬಂಧಿಸಿದಂತೆ NEET ಹಾಗೂ JEE (MAINS & ADVANCED) ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗುವುದು.
- ವಿದ್ಯಾರ್ಥಿಯ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಹಾಗೂ ಅದರ ಕೆಳಗೆ ವಿದ್ಯಾರ್ಥಿಯ ಸಹಿ ಬರುವಂತೆ JPEG/JPG format (ಗರಿಷ್ಟ 50 KB ಒಳಗಿರುಬೇಕು) ನಲ್ಲಿ Upload ಮಾಡಬೇಕು.
- ಅದೇ ರೀತಿ ಅರ್ಜಿಯಲ್ಲಿ ಅಪ್‌ಲೋಡ್ ಮಾಡಲು ತಿಳಿಸಿರುವ ಎಲ್ಲಾ ದಾಖಲೆಗಳನ್ನು PDF format (ಗರಿಷ್ಟ 300 KB ಒಳಗಿರಬೇಕು) ನಲ್ಲಿ Upload ಮಾಡಬೇಕು.
- ವಿದ್ಯಾರ್ಥಿಯು ಅಂತಿಮವಾಗಿ ಅರ್ಜಿಯನ್ನು submit ಮಾಡುವ ಮುನ್ನ ಎಲ್ಲಾ ಅಂಶಗಳು ಸರಿಯಾಗಿರುವ ಬಗ್ಗೆ Preview ನೋಡಿ ಖಚಿತ ಪಡಿಸಿಕೊಳ್ಳಬೇಕು. ಸರಿಯಾಗಿ ಭರ್ತಿ ಮಾಡದೇ ಇರುವ, ದಾಖಲೆಗಳನ್ನು ಸಲ್ಲಿಸದಿರುವ ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
- ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಒಂದು ಸೆಟ್ ಕೋರ್ಸ್ ಮೆಟಿರಿಯಲ್‌ಗಳನ್ನು ಸಂಸ್ಥೆಗಳಿಂದ ಉಚಿತವಾಗಿ ನೀಡಲಾಗುವುದು.
- ತರಬೇತಿಯು ಉಚಿತವಾಗಿದ್ದು, ವಿದ್ಯಾರ್ಥಿಗಳ ಶುಲ್ಕವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಾವತಿಸಲಾಗುವುದು.
- ವಿದ್ಯಾರ್ಥಿಗಳು ತರಬೇತಿಯನ್ನು ಮಧ್ಯಂತರದಲ್ಲಿ ಬಿಟ್ಟು ಹೋದಲ್ಲಿ ತರಬೇತಿಯನ್ನು ಪೂರ್ಣಗೊಳಿಸದಿದ್ದಲ್ಲಿ, ಅವರ ತರಬೇತಿಗೆ ಆಗಿರುವ/ಅಗುವ ವೆಚ್ಚವನ್ನು ಅಂತಹ ವಿದ್ಯಾರ್ಥಿಗಳು/ಪೋಷಕರಿಂದ ವಸೂಲಾತಿ ಮಾಡಲಾಗುವುದು.
- ವಿದ್ಯಾರ್ಥಿಯು ತಪ್ಪು ಮಾಹಿತಿ ನೀಡಿರುವುದು/ಅನರ್ಹ ವಿದ್ಯಾರ್ಥಿಯೆಂದು ಯಾವುದೇ ಹಂತದಲ್ಲಿ ಕಂಡು ಬಂದಲ್ಲಿ, ಅಂತಹ ವಿದ್ಯಾರ್ಥಿಯ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು.
- ಅರ್ಜಿಯ ಪ್ರತಿಯನ್ನು Print Option ನೀಡುವ ಮೂಲಕ ಪಡೆಯಬಹುದು.
ಆನ್‌ಲೈನ್ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು :
- ಎಸ್.ಎಸ್.ಎಲ್.ಸಿ/10ನೇ ತರಗತಿ ಅಂಕ ಪಟ್ಟಿ.
- ಜಾತಿ ಮತ್ತು ಆದಾಯ ದೃಢೀಕರಣ ಪತ್ರ.
- ವಿಶೇಷ ಚೇತನ ವಿದ್ಯಾರ್ಥಿಯಾಗಿದ್ದಲ್ಲಿ ಆ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.
- 2024-25ನೇ ಸಾಲಿನಲ್ಲಿ ಪ್ರಥಮ ಪಿ.ಯು.ಸಿ/10+1 (ವಿಜ್ಞಾನ ವಿಭಾಗ) ರಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಪ್ರವೇಶ ಶುಲ್ಕದ ರಸೀದಿಗಳು (Admission Receipt).
- ಪ್ರಥಮ ಪಿ.ಯು.ಸಿ/10+1ರಲ್ಲಿ (ವಿಜ್ಞಾನ ವಿಭಾಗ) ಓದುತ್ತಿರುವ ಬಗ್ಗೆ ಕಾಲೇಜಿನಿಂದ ನೀಡಿರುವ ಗುರುತಿನ ಚೀಟಿ (Identity Card) ಅಥವಾ ಪ್ರಥಮ ಪಿ.ಯು.ಸಿ/10+1 ರ ವಿಜ್ಞಾನ ವಿಭಾಗದಲ್ಲಿ ಪ್ರವೇಶವನ್ನು ಪಡೆದಿದ್ದು, ಪ್ರಸಕ್ತ ಅಧ್ಯಯನ ಮಾಡುತ್ತಿರುವ ಬಗ್ಗೆ ಸಂಬಂಧಪಟ್ಟ ಕಾಲೇಜಿನಿಂದ ದೃಢೀಕರಣ ಪ್ರಮಾಣ ಪತ್ರ (ಈ ದೃಢೀಕರಣ ಪಾತ್ರವನ್ನು ನೀವು ಈ ಲೇಖನದ ಕೊನೆಯ ಅಧಿಸೂಚನೆಯಲ್ಲಿ ಪ್ರಕಟಿಸಿದೆ).
ವಿಶೇಷ ಸೂಚನೆ :- ಸದರಿ ಪರೀಕ್ಷಾ ಪೂರ್ವ ತರಬೇತಿಗಳಿಗೆ ಸಂಬಂಧಿಸಿದಂತೆ NEET ಹಾಗೂ JEE (MAINS & ADVANCED) ಪರೀಕ್ಷಾ ಪೂರ್ವ ತರಬೇತಿಗಳನ್ನು ಬೆಂಗಳೂರು, ಮೈಸೂರು, ಧಾರವಾಡ ಮತ್ತು ಕಲಬುರಗಿ ನಗರಗಳಲ್ಲಿ ಮಾತ್ರ ನೀಡಲಿದ್ದು, ಅಭ್ಯರ್ಥಿಗಳು ತರಬೇತಿಗೆ ನಿಯಮಿತವಾಗಿ ಹಾಜರಾಗಬೇಕು. ಸರ್ಕಾರ ಕಾಲಕಾಲಕ್ಕೆ ನೀಡುವ ನಿರ್ದೇಶನದಂತೆ ಸದರಿ ಕೋಚಿಂಗ್ ಅನ್ನು ಕ್ಲಾಸ್ ರೂಂ (ಆಫ್‌ಲೈನ್) ಅಥವಾ ಆನ್‌ಲೈನ್ ಮೂಲಕ ನೀಡಲಾಗುವುದು.
Online ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25.08.2024 ರ ಸಂಜೆ 5:00 ಗಂಟೆ.
ಸಹಾಯ ವಾಣಿ: 8050370004 (ಸಮಯ ಬೆಳಗ್ಗೆ 10.00 ರಿಂದ ಸಂಜೆ 5.30ರ ವರೆಗೆ, ಸಾರ್ವಜನಿಕ ರಜಾ ದಿನಗಳನ್ನು ಹೊರತು ಪಡಿಸಿ)