ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಕರ್ನಾಟಕ ಸರ್ಕಾರದ ವತಿಯಿಂದ ನಗದು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.
ಈ ವಿಷಯಗಳಿಗೆ ಸಂಬಂಧಿಸಿದಂತೆ ಈ ರೀಲ್ ಮಾಡಬೇಕಾಗಿರುತ್ತದೆ:
- ಮೂಲಭೂತ ಕರ್ತವ್ಯಗಳು
- ಮೂಲಭೂತ ಹಕ್ಕುಗಳು
- ಸಂವಿಧಾನದ ಮಹತ್ವ
- ಪೀಠಿಕೆಯ ವೈಶಿಷ್ಟ್ಯ
ಅಥವಾ ಸಂವಿಧಾನಕ್ಕೆ ಸಂಬಂಧಿಸಿದ ಯಾವುದಾದರೂ ಅಂಶವನ್ನು ಬಳಸಿಕೊಂಡು ರೀಲ್ ಮಾಡಬೇಕು.
ಬಹುಮಾನಗಳು:
- ಪ್ರಥಮ ಬಹುಮಾನ ₹50,000
- ದ್ವಿತೀಯ ಬಹುಮಾನ ₹25,000
- ತೃತೀಯ ಬಹುಮಾನ ₹15,000 ನೀಡಲಾಗುತ್ತದೆ.
ನಿಯಮಗಳು ಮತ್ತು ನಿಬಂಧನೆಗಳು:
- ನಮ್ಮ ತಂಡದಿಂದ ಅನುಮೋದಿಸಲ್ಪಟ್ಟವರಿಗೆ ಮಾತ್ರ ಸ್ಪರ್ಧೆಗೆ ಅವಕಾಶ
- ರೀಲ್ಸ್ ಗಳು ನಿಗದಿಪಡಿಸಲಾದ ವಿಷಯವನ್ನು ಕಡ್ಡಾಯವಾಗಿ ಒಳಗೊಂಡಿರಬೇಕು
- ರೀಲ್ಸ್ ನ URL ಅನ್ನು ನಮಗೆ ಕಳುಹಿಸಿ, ಫೆಬ್ರವರಿ 22ರ ಸಂಜೆ 5 ಗಂಟೆ ವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪಡೆದ ಒಟ್ಟು ಲೈಕ್ ಗಳ ಮೇಲೆ ವಿಜೇತರ ಆಯ್ಕೆ ಮಾಡಲಾಗುತ್ತದೆ.
ಈ ಮೇಲ್ bcac2024@gmail.com ಗೆ ಸಂಪರ್ಕಿಸಿ ನೊಂದಾಯಿಸಿಕೊಳ್ಳಬೇಕಾಗುತ್ತದೆ. ಅಥವಾ
ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ ನೊಂದಾಯಿಸಿ.