ಮುಖ್ಯಾಂಶಗಳು

ಬಿಹಾರದ ನಂತರ ಆಂಧ್ರಪ್ರದೇಶದಲ್ಲಿ ಇಂದಿನಿಂದ ಜಾತಿ ಗಣತಿ ಕಾರ್ಯ ಆರಂಭವಾಗಿದೆ.

ಬಿಹಾರದ ನಂತರ ಆಂಧ್ರಪ್ರದೇಶದಲ್ಲಿ ಇಂದಿನಿಂದ ಜಾತಿ ಗಣತಿ ಕಾರ್ಯ ಆರಂಭವಾಗಿದೆ. ಆಂಧ್ರ ಪ್ರದೇಶ ಸರ್ಕಾರವು ಶುಕ್ರವಾರ ಸಂಪೂರ್ಣ ಜಾತಿ ಗಣತಿಯನ್ನು ನಡೆಸಲು ಪ್ರಾರಂಭಿಸಿದೆ.

ರಾಜ್ಯದ ಪ್ರತಿಯೊಂದು ಸಮುದಾಯದ ಜಾತಿ ಜನಸಂಖ್ಯೆ ಏಣಿಸುವ ಸಲುವಾಗಿ ಜಾತಿ ಜನಗಣತಿಯನ್ನು ಜನವರಿ 19 ರಿಂದ ಹತ್ತು ದಿನಗಳ ಕಾಲ ನಡೆಯಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಸಿ ಶ್ರೀನಿವಾಸ ವೇಣುಗೋಪಾಲ ಕೃಷ್ಣ ತಿಳಿಸಿದ್ದಾರೆ.

ಸಮಗ್ರ ಜಾತಿ ಗಣತಿಯನ್ನು ಒಂದೇ ಹಂತದಲ್ಲಿ 10 ದಿನಗಳ ಕಾಲ ನಿಗದಿಪಡಿಸಲಾಗಿದ್ದು, ಅಗತ್ಯವಿದ್ದರೆ ಮತ್ತಷ್ಟು ದಿನ ವಿಸ್ತರಿಸಲಾಗುವುದು ಎಂದು ಕೃಷ್ಣ ತಿಳಿಸಿದರು.

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.