ಮುಖ್ಯಾಂಶಗಳು

ಡ್ರೆಸ್ ಕೋಡ್ ಸರಿಯಿಲ್ಲ ಎಂದು ರೈತನನ್ನು ತಡೆದಿದ್ದ ಮೆಟ್ರೋ!

ಬೆಂಗಳೂರಿನ ರಾಜಾಜಿ ನಗರದ ಮೆಟ್ರೋ ಸ್ಟೆಷನ್ ಅಲ್ಲಿ ರೈತರೊಬ್ಬರು ಹೋಗಿದ್ದಾಗ ಸಿಬ್ಬಂದಿ ವರ್ಗದವರು ತಡೆದಿದ್ದಾರೆ. ಆ ರೈತ ವ್ಯಕ್ತಿಯು ಬಿಳಿ ಶರ್ಟ್ ಮತ್ತು ಒಂದು ಬಟ್ಟೆಯನ್ನು ತಲೆಯಲ್ಲಿ ಹೊತ್ತುಕೊಂಡಿದ್ದರು. ರಾಜಾಜಿನಗರ ಮೆಟ್ರೋ ನಿಲ್ದಾಣದ ಭದ್ರತಾ ತಪಾಸಣಾ ಕೇಂದ್ರದಲ್ಲಿ ಸಿಬ್ಬಂದಿಗಳು ಸಿಲ್ಲಿದರು.

ನೈಜ ದೃಶ್ಯ


ಇವರನ್ನು ಬಿಡದಿದ್ದಕ್ಕೆ ಸಾರ್ವಜನಿಕ ವ್ಯಕ್ತಿಗಳು ಪ್ರಶ್ನೆ ಮಾಡಿ ಭದ್ರತಾ ತಪಾಸಣಾ ಕೇಂದ್ರದಲ್ಲಿ ಸಿಬ್ಬಂದಿಗಳನ್ನೂ ಪ್ರಶ್ನಿಸಿದ್ದಾರೆ. ಇವರು ಸರಿಯಾದ ಟಿಕೆಟ್ ಒಂದಿದ್ದರು ಯಾಕೆ ಬಿಡುತ್ತಿಲ್ಲ ಎಂದು ಯಾಕೆ ಬಿಡಲ್ಲ ಎಂದು ಪ್ರಶ್ನಿಸಿದ್ದರು!
ನಂತರ ಇದಕ್ಕೆ ಪ್ರತಿಕ್ರಿಯಿಸಿರುವ ಮೆಟ್ರೋ ಈಗೆ ತಿಳಿಸಿದೆ
ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದೆ. ರಾಜಾಜಿನಗರ ಘಟನೆಯನ್ನು ತನಿಖೆ ಮಾಡಲಾಗಿದೆ ಮತ್ತು ಭದ್ರತಾ ಮೇಲ್ವಿಚಾರಕರ ಸೇವೆಗಳನ್ನು ಕೊನೆಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ BMRCL ವಿಷಾದಿಸುತ್ತದೆ.

ಇದಲ್ಲದೆ, ಪ್ರಯಾಣಿಕರು ರಾಜಾಜಿನಗರದಿಂದ ಮೆಜೆಸ್ಟಿಕ್‌ಗೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಎಂದು BMRCL ದೃಢಪಡಿಸುತ್ತದೆ. ಅಲ್ಲದೆ, ಡಿವೈ ನೇತೃತ್ವದಲ್ಲಿ ವಿವರವಾದ ತನಿಖೆಗಾಗಿ ಆಂತರಿಕ ಸಮಿತಿಯನ್ನು ರಚಿಸಲಾಗಿದೆ. ಘಟನೆಗೆ ಮತ್ತೊಮ್ಮೆ ವಿಷಾದಿಸುತ್ತೇವೆ. ಎಂದು ಮೆಟ್ರೋ ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.