ಮುಖ್ಯಾಂಶಗಳು

ಗೃಹ ಜ್ಯೋತಿ (Gruha Jyothi) ಬಳಕೆದಾರರಿಗೆ ಶುಭ ಸುದ್ದಿ!.

ಗೃಹ ಜ್ಯೋತಿ ಯೋಜನೆಯು ರಾಜ್ಯದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಕರ್ನಾಟಕ ರಾಜ್ಯದ ಜನರಿಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ ನಿವಾಸಿಗಳ ಕಲ್ಯಾಣಕ್ಕಾಗಿ ಕರ್ನಾಟಕ ಸರ್ಕಾರವು ‘ಗೃಹ ಜ್ಯೋತಿ ಯೋಜನೆ’ಯನ್ನು ಜಾರಿಗೊಳಿಸುವುದಾಗಿ ಘೋಷಿಸಿತು. ಈ ಯೋಜನೆಯ ಮುಖ್ಯ ಉದ್ದೇಶವು ಕರ್ನಾಟಕದ ಪ್ರತಿ ಮನೆಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುವ ಮೂಲಕ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದು. ಈ ಗೃಹ ಜ್ಯೋತಿ ಯೋಜನೆಯು ಮಧ್ಯಮ ವರ್ಗದ ಜನರಿಗೆ ಹೆಚ್ಚು ಅನುಕೂಲಕರವಾಗಿದೆ. ರಾಜ್ಯದಲ್ಲಿ ಸುಮಾರು  1.56 ಕೋಟಿ ಜನರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಹಾಗೆ, ಅಸ್ತಿತ್ವದಲ್ಲಿರುವ ಕುಟೀರ ಜ್ಯೋತಿ, ಅಮೃತ ಜ್ಯೋತಿ ಮತ್ತು ಭಾಗ್ಯಜ್ಯೋತಿ ಯೋಜನೆಗಳನ್ನು ಗೃಹ ಜ್ಯೋತಿ ಯೋಜನೆಯೊಂದಿಗೆ ವಿಲೀನಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ. ಈ ಗೃಹ ಜ್ಯೋತಿ ಯೋಜನೆಯು ಜಾರಿಯಾಗಿ ಇದೀಗ ಒಂದು ವರ್ಷ ಪೂರೈಸಿದೆ.

ಗೃಹಲಕ್ಷ್ಮಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಒಂದು ಶುಭ ಸುದ್ದಿ ಪ್ರಕಟಿಸಿದೆ. ಈಗಾಗಲೆ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಲಾಭ ಪಡೆಯುತ್ತಿರುವ ಬಾಡಿಗೆದಾರರು ಮನೆ ಬದಲಿಸಿದ್ದರೆ ಮತ್ತೆ ಹೇಗೆ ಗೃಹ ಜ್ಯೋತಿ ಯೋಜನೆ ಲಾಭ ಪಡೆದುಕೊಲಕ್ಕಬೇಕು ಎಂದು ಚಿಂತಿಸುತ್ತಿರುವವರು ನೀವಾಗಿದ್ದರೆ ರಾಜ್ಯ ಸರ್ಕಾರದಿಂದ ಶುಭ ಸುದ್ದಿ.

ರಾಜ್ಯದ ನಿವಾಸಿ ಬಾಡಿಗೆದಾರರು ಮನೆ ಬದಲಾಯಿಸಿದಾಗ ಹಳೇ ಮನೆಯ ವಿದ್ಯುತ್ ಬಿಲ್ ನಲ್ಲಿರುವ ಆರ್.ಆರ್. ಸಂಖ್ಯೆಯೊಂದಿಗೆ ಜೋಡಣೆಯಾದ ಆಧಾರ್ ನಂಬರ್ ಕಡಿತಗೊಳಿಸಿ, ಮತ್ತೆ ಹೊಸದಾಗಿ ಲಿಂಕ್ ಮಾಡಿಕೊಳ್ಳಬಹುದು. ಎಂದರೆ, ನೀವು ಬೇರೆ ಬಾಡಿಗೆ ಮನೆಗೆ ತೆರಳಿದ ನಂತರವೂ ನೀವು ಈ ಹಿಂದೆ ಇದ್ದ ಬಾಡಿಗೆ ಮನೆಯ ವಿದ್ಯುತ್ ಬಿಲ್ ಅನ್ನು ಡಿ-ಲಿಂಕ್  ಎಂದರೆ – ಕಡಿತಗೊಳಿಸಿ. ಹೊಸ ಮನೆಯ ವಿದ್ಯುತ್ ಬಿಲ್ ನಲ್ಲಿರುವ ಆರ್.ಆರ್. ಸಂಖ್ಯೆಯೊಂದಿಗೆ ಜೋಡಣೆಯಾದ ಆಧಾರ್ ನಂಬರ್ ಗೆ ಮತ್ತೆ ಲಿಂಕ್ ಮಾಡಬಹುದಾಗಿದೆ. ಇದು ನಗರ ಮತ್ತು ಪಟ್ಟಣದಲ್ಲಿ ವಾಸವಿರುವ ನಿವಾಸಿಗಳಿಗೆ ಅತಿ ಹೆಚ್ಚು ಅನುಕೂಲ ಆಗಲಿದೆ. 

ಈ ಹಿಂದೆ ಡಿ-ಲಿಂಕ್‌ಗೆ (Gruha Jyothi Delink Aadhaar) ಅವಕಾಶ ಇರಲಿಲ್ಲ. ಬಾಡಿಗೆದಾರರು ಮನೆ ಬದಲಾಯಿಸಿದರೆ ತಮ್ಮ ಮನೆಯ ಬೇರೆ ಸದಸ್ಯರ ಆಧಾರ್ ಲಿಂಕ್ ಮಾಡಬೇಕಾಗಿತ್ತು. ಇದೀಗ ಇಂಧನ ಇಲಾಖೆಯು ಈಗ ಡಿ-ಲಿಂಕ್‌ಗೆ ಅವಕಾಶ ಮಾಡಿಕೊಟ್ಟಿದೆ.

“ಈ ಯೋಜನೆಯಿಂದ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಬಿಲ್‌ನ ಹಣವನ್ನು ಮಕ್ಕಳ ಟ್ಯೂಷನ್ ಫೀಸ್, ಹಿರಿಯರ ಔಷಧೋಪಚಾರಕ್ಕೆ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ.

ನಾವು ನುಡಿದಂತೆ ನಡೆದಿದ್ದೇವೆ ಎಂಬ ಸಾರ್ಥಕ ಭಾವ ನಮ್ಮಲ್ಲಿದೆ. ಜನರು ಡಿ-ಲಿಂಕ್ ಸೌಲಭ್ಯ ಬೇಕೆಂದು ಕೋರಿದ್ದರು. ಈಗ ಸಾಫ್ಟ್‌ವೇರ್ ನಲ್ಲಿ ಬದಲಾವಣೆ ಮಾಡಿ ಈ ಸೌಲಭ್ಯವನ್ನು ಜನರಿಗೆ ನೀಡಿದ್ದೇವೆ” – ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಗೃಹಜ್ಯೊತಿ ಡಿ-ಲಿಂಕ್ ಮಾಡುವುದು ಹೇಗೆ?

ಈ ಕೆಳಗೆ ನೀಡಿರುವ ಸೇವಸಿಂದು ಡೈರೆಕ್ಟ್ ಲಿಂಕ್ ಮೂಲಕ ನೀವು ಆ‌ರ್.ಆ‌ರ್. ಸಂಖ್ಯೆಯನ್ನು ಡಿ-ಲಿಂಕ್ ಮಾಡಬಹುದು.

⬇️ ⬇️ ⬇️

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.