ಮುಖ್ಯಾಂಶಗಳು

ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದಿಂದ ಮಹಾ ತೀರ್ಪು. ಇಂದಿನಿಂದ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬರಲಿದೆ.

ಮೇ 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುದೊಡ್ಡ ಗೆಲುವು ಪಡೆದ ಬಳಿಕ ತಮ್ಮ ಐದು ಗ್ಯಾರಂಟಿಗಳ ಪೈಕಿ, ಕರ್ನಾಟಕ ಸರ್ಕಾರವು ಮೊದಲು ಮಹಿಳೆಯರನ್ನು ಬೆಂಬಲಿಸಲು ಮತ್ತು ಅವರ ಜೀವನೋಪಾಯವನ್ನು ಸುಧಾರಿಸಲು ಗೃಹ ಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸಿತ್ತು. ಇದು ಗೃಹಿಣಿಯರು, ಭೂರಹಿತ ಮಹಿಳೆಯರು ಮತ್ತು ಕೃಷಿ ಮಹಿಳಾ ಕಾರ್ಮಿಕರಿಗೆ ನೇರ ಲಾಭ ವರ್ಗಾವಣೆ (ಡಿ.ಬಿ.ಟಿ) ಮೂಲಕ ಹಣಕಾಸಿನ ನೆರವು ನೀಡುವ ಮೂಲಕ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. 16 ಆಗಸ್ಟ್ 2023 ರ ನಂತರ ಮಹಿಳೆಯರು ರೂ.2,000 ಮೊತ್ತವನ್ನು ಸ್ವೀಕರಿಸಲು ಪ್ರಾರಂಭಿಸಿದ್ದರೆ. ರಾಜ್ಯದ ಸುಮಾರು 1. 28 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆದ್ದಿದ್ದಾರೆ ಮತ್ತು ಅದನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ.

ಕಳೆದ ವರ್ಷ ಎಂದರೆ 2023 ಆಗಸ್ಟ್ 16 ರಿಂದ ಸುಮಾರು ಮೇ 2024 ರವರೆಗೆ ಎಲ್ಲ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿದೆ. ಆದರೆ ಕಳೆದ 2 ತಿಂಗಳಿಂದ (ಜೂನ್-ಜುಲೈ) ಗೃಹಲಕ್ಷ್ಮಿ ಹಣ ಯಾವ ಮಹಿಳೆಯರಿಗೂ ಬಂದಿಲ್ಲ. ಈ ಬೆಳವಣಿಗೆ ಕೆಲವು ಹುಹಾ-ಪೊಹಗಳಿಗೆ ದಾರಿ ಮಾಡಿದೆ. ಆದರೆ ಈ ಎಲ್ಲ ಹುಹಾ-ಪೊಹಗಳಿಗೆ ಕರ್ನಾಟಕ ಸರ್ಕಾರ ತೆರೆಯಳೆದಿದೆ.

“ಕೆಲವು ತಾಂತ್ರಿಕ ದೋಷಗಳಿಂದ ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಜಮೆ ಆಗಿರಲಿಲ್ಲ. ಇಂದಿನಿಂದ ಎಂದರೆ 7 ಆಗಸ್ಟ್ ರಿಂದ ಈ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮೆಯಾಗಲಿದೆ” – ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್‌ ತಿಳಿಸಿದ್ದಾರೆ.

ಅವರು ಹೇಳಿದ ಹಾಗೆ, ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಇಂದಿನಿಂದ ಎಂದರೆ 7 ಆಗಸ್ಟ್ ಇಂದ ಜಮೆಯಗಲಿದೆ. ನೀವು ಕೂಡ ಸುಲಭವಾಗಿ ಗೃಹಲಕ್ಷ್ಮಿ ಪ್ರತಿ ತಿಂಗಳ ಹಣವನ್ನ ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಕೆಳಗೆ ಕ್ಲಿಕ್ ಮಾಡಿ.

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.