ಇಂದಿನ ಡಿಜಿಟಲ್ ಯುಗವನ್ನ ಹ್ಯಾಕರ್‌ಗಳು ದುರುದ್ದೇಶಗಳಿಗೆ ಬಳಸಿಕೊಳ್ಳುತ್ತಾರೆ. ಹ್ಯಾಕರ್‌ಗಳು ವೈಯಕ್ತಿಕ ಮತ್ತು ಕಾರ್ಪೊರೇಟ್ ಡೇಟಾವನ್ನು ಹೆಚ್ಚು ಗುರಿಯಾಗಿಸಿಕೊಂಡಿದ್ದಾರೆ. ಅವರು ನಮ್ಮ ಸಿಸ್ಟಮ್‌ಗಳಲ್ಲಿನ ಮತ್ತು ಮೊಬೈಲ್ ದುರ್ಬಲತೆಗಳನ್ನು ಬಳಸಿಕೊಂಡು, ನಮ್ಮ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಯನ್ನು ಕದಿಯಲು ಮುಂದಾಗಿದ್ದಾರೆ. ಸಾಮಾನ್ಯವಾಗಿ ಹಣಕಾಸಿನ ಲಾಭಕ್ಕಾಗಿ ಅಥವಾ ಕೆಲಸಗಳನ್ನ ಅಡ್ಡಿಪಡಿಸಲು ಈ ಕೃತ್ಯಗಳನ್ನ ಹೆಸಗುತ್ತಿದರೆ. ನಮ್ಮ ವೈಯಕ್ತಿಕ ಮತ್ತು ಹಣಕಾಸಿನ ವಿವರಗಳನ್ನು ಬಹಿರಂಗಪಡಿಸುವುದು ಡೇಟಾ ಉಲ್ಲಂಘನೆಗಳಿಗೆ ಮತ್ತು ಸೈಬರ್ ಅಪರಾಧಗಾಳಿಗೆ ಕಾರಣವಾಗಿದೆ. ಇದನ್ನು ನಮ್ಮ ಹತ್ತಿರ ಬೆದರಿಸಿ ಹಣ ವಸೂಲಿ ಮಾಡುವುದಕ್ಕೆ ಅಥವಾ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಬಹುದು. ಈ ಎಲ್ಲ ಅಪಾಯಕಾರಿ ವಿಷಯಗಳಿಗೆ ನಾವು ಬಲಿಪಶುವಾಗಬಹುದು.
ಇಂತದೊಂದು ಕೃತ್ಯ ಇತಿಹಾಸದಲ್ಲಿಯೇ ಯಾರು ಹುಹಿಸಲದಗ ಅತಿ ದೊಡ್ಡ ಪಾಸ್‌ವರ್ಡ್ ಸೋರಿಕೆ ಒಂದು ಅತಿ ಬಯಂಕರ ಮತ್ತು ಅಪಾಯಕರಿ ಡಾರ್ಕ್ ವೆಬ್ನಲ್ಲಿ ಸೋರಿಕೆಯಾಗಿ.
ಈ ಅಪಾಯಗಳಿಂದ ಸುರಕ್ಷಿತ ಮತ್ತು ಜಾಗರೂಕರಾಗಿರುವುದು ಹೇಗೆ ಎಂಬ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ನಾವು ಈ ಎಲ್ಲ ವಿಷಯಗಳನ್ನ ಹಂತ ಹಂತವಾಗಿ ತಿಳಿಸಿದ್ದೇವೆ ಆದ್ದರಿಂದ ಈ ಲೇಖನವನ್ನ ಪೂರ್ಣವಾಗಿ ಓದಿ.
ಒಂದು ಜನಪ್ರಿಯ ಹ್ಯಾಕಿಂಗ್ ಫೋರಮ್‌ನಲ್ಲಿ ಹೊಸದಾಗಿ ನೋಂದಾಯಿತ ಬಳಕೆದಾರನೊಬ್ಬ ಸುಮಾರು 1,000 ಕೋಟಿ ಪಾಸ್‌ವರ್ಡ್‌ಗಳನ್ನು ಹೊಂದಿರುವ ಫೈಲ್ ಅನ್ನು ಅತಿ ಬಯಂಕಾರಿ ಮತ್ತು ಅಪಾಯಕಾರಿ ಡಾರ್ಕ್ ವೆಬ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ಕೃತ್ಯವನ್ನು ಸೈಬರ್‌ನ್ಯೂಸ್‌ನ ( Cyber News ) ಸಂಶೋಧಕರು ಮೊದಲು ಗಮನಿಸಿ ಈ ಅಪಾಯಕಾರಿ ವಿಷಯವನ್ನು ಬೆಳಕಿಗೆ ತಂದಿದ್ದಾರೆ. ಈ ಫೈಲ್ನ ಹೆಸರು RockYou2024 ಆಗಿದೆ. RockYou2021, RockYou2022 ಮತ್ತು RockYou2023 ಇದೇ ರೀತಿ ಪಾಸ್ವರ್ಡ್ ಸೋರಿಕೆ ಪ್ರತಿ ವರ್ಷಕೊಮ್ಮೆ, ತಿಂಗಳಿಗೊಮ್ಮೆ ಬೆಳಕಿಗೆ ಬರುವುದು ಸಹಜವಾಗಿದೆ ಮತ್ತು ಇದು ನಕಲಿಯೋ ಅಥವಾ ಸತ್ಯವು ಆಗಿರಬಹುದು. ಆದರೆ ಈ ಕೃತ್ಯಗಳಿಂದ ಮುನ್ನೆಚ್ಚರಿಕೆ ಆಗಬೇಕಾಗಿರುವುದು ನಮ್ಮ ಕರ್ತವ್ಯ.
© ಹ್ಯಾಕರ್ ಫೋರಂನಲ್ಲಿ ಸೋರಿಕೆಯನ್ನು ಪ್ರಕಟಿಸುವ ಸೂಚನೆಯ ಪೋಸ್ಟ್. ಸೈಬರ್‌ನ್ಯೂಸ್‌ನಿಂದ ಚಿತ್ರಗಳು.
ನಿಮ್ಮ ಪಾಸ್‌ವರ್ಡ್ ಸೋರಿಕೆಯಾಗಿದೆಯೇ? ಇಲ್ಲಿ ಪರಿಶೀಲಿಸಿ?
ನಿಮ್ಮ ಪಾಸ್‌ವರ್ಡ್ ಸೋರಿಕೆಯನ್ನು ಸೈಬರ್ ನ್ಯೂಸ್ (Cyber News) ಅಭಿವೃದ್ಧಿಪಡಿಸಿದ ಪರಿಶೀಲನಾ ಸಾಧನದಿಂದ ನೀವು ಸೆಕೆಂಡುಗಳಲ್ಲಿ ಪರೀಕ್ಷಿಸಬಹುದು ಮತ್ತು ಇಂದೇ ನಿಮ್ಮ ಡೇಟಾವನ್ನು ರಕ್ಷಿಸಲು ಕೆಳಗಿರುವ ಸಲಹೆಗಳ ಮೂಲಕ ಕ್ರಮ ತೆಗೆದುಕೊಳ್ಳಿ.
ನಿಮ್ಮನ್ನು ಸೋರಿಕೆಯಿಂದ ಮತ್ತು ನಿಮ್ಮ ಪಾಸ್ವರ್ಡ್ ರಕ್ಷಿಸಿಕೊಳ್ಳುವುದು ಹೇಗೆ?
ಮೊದಲು ಮೆಲೇಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಪಾಸ್ವರ್ಡ್ ಸೋರಿಕೆ ಆಗಿದಿಯ ಎಂದು ಪರಿಶೀಲಿಸಿ. ಆ ನಂತರ ಸೋರಿಕೆಯಾದ ಪಾಸ್‌ವರ್ಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಖಾತೆಗಳಿಗೆ ಪಾಸ್‌ವರ್ಡ್‌ಗಳನ್ನು ತಕ್ಷಣವೇ ಮರು ಬದಲಿಸಿ.
- ಪ್ರಬಲವಾದ, ವಿಶಿಷ್ಟವಾದ ಪಾಸ್‌ವರ್ಡ್‌ಗಳನ್ನು ಬಳಸಿ :
- ನಿಮ್ಮ ಪಾಸ್ವರ್ಡ್ “Abhi@123” ಹೆಸರು ಅಥವಾ ಹುಟ್ಟುಹಬ್ಬದಂತಹ ವೈಯಕ್ತಿಕ ಮಾಹಿತಿಯಂತಹ ಸುಲಭವಾಗಿ ಊಹಿಸಬಹುದಾದ ಪಾಸ್‌ವರ್ಡ್‌ಗಳನ್ನು ಬಳಸುವುದನ್ನು ನಿಲ್ಲಿಸಿ.
- ದೊಡ್ಡಕ್ಷರ, ಸಣ್ಣಕ್ಷರ, ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳ ಮಿಶ್ರಣದೊಂದಿಗೆ ಪಾಸ್ವರ್ಡ್ಗಳನ್ನು ರಚಿಸಿ.
- ಉದಾಹರಣೆ : B7$tV8@k ಅಥವಾ W@4cJ^7C.
- ಎರಡು ಅಂಶದ ದೃಢೀಕರಣವನ್ನು ಸಕ್ರಿಯಗೊಳಿಸಿ (Two-Step Verification) :
- ಎರಡು ಅಂಶದ ದೃಢೀಕರಣ (Two-Step Verification) ಎಂದರೆ ನಿಮ್ಮ ಪಾಸ್‌ವರ್ಡ್‌ಗೆ ಮೀರಿದ ಎರಡನೇ ರೂಪದ ಪರಿಶೀಲನೆ. ಇದು ನಿಮ್ಮ ಖಾತೆಗಳಿಗೆ ಹೆಚ್ಚುವರಿ ಭದ್ರತೆಯನ್ನು ಸೇರಿಸುತ್ತದೆ.
- ನೀವು ಬಳಸುವ ಎಲ್ಲಾ ಅಪ್ಲಿಕೇಶನ್‌ಗಳಲ್ಲಿ ಮತ್ತು ವೆಬ್‌ಸೈಟ್‌ಗಳಲ್ಲಿ, ನಿಮ್ಮ ಖಾತೆಯ ಸೆಟ್ಟಿಂಗ್‌ಗಳಲ್ಲಿ ಎರಡು ಅಂಶದ ದೃಢೀಕರ (Two-Step Verification) ಇರುತ್ತದೆ. ಅದನು ಸಕ್ರಿಯಗೊಳಿಸಿ. ಇದು ಸಾಮಾನ್ಯವಾಗಿ SMS ಮೂಲಕ ಕೋಡ್ (OTP) ಕಳುಹಿಸಿ ಪರಿಶೀಲಿಸುತ್ತದೆ.
- ನಿಮ್ಮ ಪಾಸ್‌ವರ್ಡ್‌ಗಳನ್ನು ನವೀಕರಿಸಿ :
- ಪ್ರತಿ 6 ತಿಂಗಳು ಮತ್ತು 1 ವರ್ಷಕೊಮ್ಮೆ ನಿಮ್ಮ ಎಲ್ಲ ಪಾಸ್‌ವರ್ಡ್‌ಗಳನ್ನು ಒಮ್ಮೆ ಬದಲಾಯಿಸಿ ಮತ್ತು ಹಳೆಯ ಪಾಸ್‌ವರ್ಡ್‌ಗಳನ್ನು ಮರುಬಳಕೆ ಮಾಡುವುದನ್ನು ತಪ್ಪಿಸಿ. ಇದು ನಿಮ್ಮನು ಇನ್ನು ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ.
- ಫಿಶಿಂಗ್ ಹಗರಣಗಳ ಬಗ್ಗೆ ಎಚ್ಚರವಿರಲಿ :
- ಫಿಶಿಂಗ್ ಪ್ರಯತ್ನಗಳು ನಿಮ್ಮ ಪಾಸ್‌ವರ್ಡ್‌ಗಳನ್ನು ಬಹಿರಂಗಪಡಿಸುವ ಟ್ರಿಕ್ ಆಗಿದೆ.
- ಇಮೇಲ್, SMS ಮತ್ತು ವಾಟ್ಸಾಪ್ ನಲ್ಲಿ ಬರುವಂತಹ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು ಮತ್ತು ಲಾಗಿನ್ ಮಾಹಿತಿಯನ್ನು ಒದಗಿಸುವುದನ್ನು ನಿಲ್ಲಿಸಿ ಮತ್ತು ಆ ಲಿಂಕ್ ಅಧಿಕೃತವಾಗಿದೆಯೇ ಎಂದು ಪರಿಶೀಲಿಸಿದ ನಂತರ ನಿಮ್ಮ ಗೋಪ್ಯ ಮಾಹಿತಿಗಳನ್ನು ನೀಡಿ.
- ನಿಮ್ಮ ಕಥೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು :
- ನಿಮ್ಮ ಖಾತೆಗಳನ್ನು ನಿಯಮಿತವಾಗಿ ಪರಿಶೀಲಿಸಿ, ಇದು ಅನಧಿಕೃತ ಪ್ರವೇಶವನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ.
- ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇತರ ಅಪ್ಲಿಕೇಶನ್‌ಗಳು ನಿಮ್ಮನು ಹೊರತುಪಡಿಸಿ ಬೇರೆಯವರು ಲಾಗಿನ್ ಆದರೆ ಅಥವಾ ಪ್ರಯತ್ನಿಸಿದರೆ ಅವರು ಎಚ್ಚರಿಕೆಗಳನ್ನು ನೀಡುತ್ತಾರೆ ಮತ್ತು ಇದು ಕಂಡು ಬಂದಲ್ಲಿ ಅವರ ನೀಡುವ ಸಲಹೆಯಂತೆ ಮಾಡಿ ಮತ್ತು ನಿಮ್ಮ ಖಾತೆಯನ್ನು ಭದ್ರತೆ ಪಡಿಸಿಕೊಳ್ಳಿ.
ನಿಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಧೀರ್ಘಕಾಲದ ಉಳಿವಿಗಾಗಿ ಸುರಕ್ಷಿತಗೊಳಿಸುವಲ್ಲಿ ನಿಮ್ಮ ಪಾಸ್‌ವರ್ಡ್‌ಗಳನ್ನು ರಕ್ಷಿಸುವುದು ಒಂದು ಪ್ರಮುಖ ಹಂತವಾಗಿದೆ. ಈ ಮೇಲಿನ ತಂತ್ರಗಳನ್ನು ಮತ್ತು ಸಲಹೆಗಳನ್ನು ಅನುಸರಿಸುವ ಮೂಲಕ, ಸೈಬರ್ ಬೆದರಿಕೆ ಮತ್ತು ಅಪಾಯಹಳ್ಳಿಗೆ ಬಲಿಯಾಗುವುದನ್ನು ನೀವು ತಪ್ಪಿಸಬಹುದು.